ಬೆಳಗಾವಿಯಲ್ಲಿ ಅಧಿವೇಶನ : ದುಬಾರಿ ಹೋಟೆಲ್ ನಲ್ಲಿ ಸಚಿವರು ಮತ್ತು ಶಾಸಕರ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-0004

ಬೆಂಗಳೂರು, ನ.12- ನಾಳೆಯಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಆರಂಭವಾಗಲಿರುವ ಅಧಿವೇಶನಕ್ಕೆ ನಗರದ ದುಬಾರಿ ಹೋಟೆಲಾದ ಮ್ಯಾರಿಟ್‍ನಲ್ಲಿ ಸರ್ಕಾರದ ಸಚಿವರು ಮತ್ತು ಶಾಸಕರಿಗೆ ವಸತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಹೀಗೆ ಅಧಿವೇಶನಕ್ಕೆ ಆಗಮಿಸುವವರಿಗೆ ಜಿಲ್ಲಾಡಳಿತ ಭರ್ತಿ 1500 ಹೋಟೆಲ್ ರೂಮ್‍ಗಳನ್ನ ಬುಕï ಮಾಡಿದೆ.

ಇನ್ನೂ ಒಂದೆಡೆ ಚಳಿಗಾಲ ಅಧಿವೇಶನದ ಮೊದಲ ದಿನವೇ ಎಂಇಎಸ್‍ನವರು ಮಹಾಮೇಳಾವಾಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದ ವ್ಯಾಕ್ಸಿನ್ ಡಿಪೊೀದ ಮೈದಾನದಲ್ಲಿ ಮೇಳಾವಾ ನಡೆಸಲು ಅನುಮತಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಕೇಳಿಕೊಂಡಿದೆ. ನಾಡದ್ರೋಹಿಗಳು ಮೇಳಾವಾಗೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತದಾದ ಪಾಟೀಲ ಹಾಗೂ ವಿಪಕ್ಷ ನಾಯಕ ಧನಂಜಯ ಮುಂಡೆ ಅವರಿಗೆ ಆಹ್ವಾನ ನೀಡಿದ್ದಾರೆ.

ಕಳೆದ ಭಾರಿ ಇದೇ ರೀತಿ ಮಹಾ ನಾಯಕರಿಗೆ ಎಂಇಎಸ್ ಪುಂಡರು ಆಹ್ವಾನ ನೀಡಿದ್ರೆ. ಅಂದಿನ ಡಿಸಿ ಎನ್. ಜಯರಾಮï ಮಹಾಮಂತ್ರಿಗಳು ಕನ್ನಡದ ನೆಲದಲ್ಲಿ ಕಾಲಿಡದಂತೆ ನಿರ್ಬಂಧ ವಿಧಿಸಿದರು. ಆದರೆ ಈ ವರ್ಷವೂ ಮಹಾ ನಾಯಕರಿಗೆ ಎಂಇಎಸ್ ಪುಂಡರು ಆಹ್ವಾನಿಸಿದ್ದಾರೆ. ಆದರೆ ಈ ಬಾರಿ ಜಿಲ್ಲಾಡಳಿತ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ಕಳವಳಕ್ಕೆ ಕಾರಣವಾಗಿದೆ. ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಸರ್ಕಾರದ ಆಡಳಿತ ಯಂತ್ರ ಠಿಕಾಣಿ ಹೂಡುವುದರಿಂದ ಮತ್ತು ಅಧಿವೇಶನ ಉದ್ದಕ್ಕೂ ಉತ್ತರ ಕರ್ನಾಟಕದ ಶಕ್ತಿ ಕೇಂದ್ರದ ಹೊರಗೆ ಸಾಲು ಸಾಲು ಪ್ರತಿಭಟನೆಗಳು ನಡೆಯಲಿದ್ದು, ಹೀಗಾಗಿ ಬೆಳಗಾವಿ ನಗರ ಪೊಲೀಸರು ಬೀಗಿ ಪೊಲೀಸ್ ಭದ್ರತೆ ಕೈಗೊಂಡಿದ್ದಾರೆ.

ಭದ್ರತೆಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಇಬ್ಬರು ಪೊಲೀಸ್ ಆಯುಕ್ತರು, 7 ಜನ ಎಸ್ಪಿ, 13 ಜನ ಹೆಚ್ಚುವರಿ ಎಸ್ಪಿ, 33 ಡಿವೈಎಸ್ಪಿ ಸೇರಿ 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಜತೆಗೆ ದ್ವೊರೆಸ್ವಾಮಿ ನೇತೃತ್ವದಲ್ಲಿ ತಮಟೆ ಚಳುವಳಿ, ರೈತರು, ಖಾಸಗಿ ವೈದ್ಯರ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೇರಿ 40ಕ್ಕೂ ಅಧಿಕ ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯಲಿವೆ. ಹೀಗೆ ಪ್ರತಿಭಟನೆಗಾಗಿ ಸುವರ್ಣ ವಿಧಾನಸೌಧ ಹೊರಗೆ ಪ್ರತ್ಯೇಕವಾಗಿ ಸ್ಥಳವನ್ನ ಗುರುತಿಸಿ ಪೆಂಡಾಲಗಳನ್ನು ಹಾಕಲಾಗಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಹತ್ತು ದಿನಗಳ ಕಾಲ ಉತ್ತರದತ್ತ ಮುಖ ಮಾಡುತ್ತಿದ್ದು, ಬೆಳಗಾವಿಯ 8ನೇ ಚಳಿಗಾಲದ ಅಧಿವೇಶನವೂ ಉತ್ತರ ಕರ್ನಾಟಕದ ಜನರಲ್ಲಿ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಯನ್ನ ಮೂಡಿಸಿದೆ.

Facebook Comments

Sri Raghav

Admin