ಸೌದಿಯಿಂದ ಲೆಬನಾನ್ ಪ್ರಧಾನಿ ಅಪಹರಣ…?

ಈ ಸುದ್ದಿಯನ್ನು ಶೇರ್ ಮಾಡಿ

Saad-al-Hariri-2

ಬೈರುತ್, ನ.12-ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ತಲೆದೋರಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ತನ್ನ ಪ್ರಧಾನಮಂತ್ರಿ ಸಾದ್ ಅಲ್-ಹರೀರಿಯನ್ನು ಸೌದಿ ಅರೇಬಿಯಾದ ಪ್ರಭಾವಿಗಳು ಅಪಹರಿಸಿದ್ದಾರೆ ಎಂದು ಲೆಬನಾನ್ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಲೆಬನಾನ್ ಅಧ್ಯಕ್ಷ ಮೈಕೆಲ್ ಔನ್, ಸೌದಿ ಅರೇಬಿಯಾ ಸರ್ಕಾರದ ಮುಖ್ಯಸ್ಥರೊಂದಿಗೆ ಈ ಸಂಬಂಧ ಮಾತನಾಡಿದ್ದಾರೆ.

ನವೆಂಬರ್ 4 ರಂದು ನಿಮ್ಮ ದೇಶಕ್ಕೆ ಬಂದು ಹಠಾತ್ ರಾಜೀನಾಮೆ ಪ್ರಕಟಿಸಿದ ನಂತರ ಪ್ರಧಾನಿ ಹರೀರಿ ಹಿಂದಿರುಗಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅಧ್ಯಕ್ಷರು ಆಗ್ರಹಿಸಿದ್ದಾರೆ. ಈವರೆಗೆ ಹರೀರಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಕಾರಣ ಅವರನ್ನು ಅಪಹರಿಸಿ ಗುಪ್ತ ಸ್ಥಳದಲ್ಲಿ ಇಟ್ಟಿರಬಹುದೆಂಬ ಅನುಮಾನಗಳಿವೆ.

ಈ ಬೆಳವಣಿಗೆಯಿಂದಾಗಿ ಲೆಬನಾನ್ ಮತ್ತು ಸೌದಿ ಅರೇಬಿಯಾ ನಡುವಣ ಸಂಬಂಧ ಮತ್ತಷ್ಟು ಹಳಸಿದೆ. ತನ್ನ ರಾಜಕೀಯ ವಿಷಯಗಳಲ್ಲಿ ಸೌದಿ ವಿನಾಕಾರಣ ಹಸ್ತಕ್ಷೇಪ ಮಾಡುತ್ತಾ, ಗುಂಪುಗಾರಿಕೆಗೆ ಕಾರಣವಾಗಿದೆ ಎಂದು ಹರೀರಿ ಮೊದಲಿನಿಂದಲೂ ಸೌದಿ ವಿರುದ್ಧ ಆರೋಪಿಸುತ್ತಲೇ ಬಂದಿದ್ದರು.
ಬೈರುತ್ ಮತ್ತು ಸೌದಿ ನಡುವೆ ಭಿನ್ನಾಭಿಪ್ರಾಯ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಫ್ರಾನ್ ದೇಶಗಳು ಲೆಬನಾನ್‍ನ ಸಾರ್ವಭೌಮತ್ವ ಮತ್ತು ಸ್ಥಿರತೆಗೆ ಅಗತ್ಯವಾದ ಎಲ್ಲ ಬೆಂಬಲ ನೀಡುವುದಾಗಿ ಘೋಷಿಸಿದೆ.

Facebook Comments

Sri Raghav

Admin