ಅಮಾನಿಕೆರೆ ಪ್ರವಾಸಿ ವೀಕ್ಷಕರ ವಾಹನ ಪಲ್ಟಿಯಾಗಿ 14 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

tumakuru

ತುಮಕೂರು, ನ.13- ಅಮಾನಿಕೆರೆಯ ಸೌಂದರ್ಯವನ್ನು ಸವಿಯಲು ಕಲ್ಪಿಸಲಾಗಿದ್ದ ಪ್ರವಾಸಿಗರ ಸಂಚಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 14 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮಳೆ ಹಾಗೂ ಹೇಮಾವತಿ ನೀರಿನಿಂದ ಅಮಾನಿಕೆರೆ ತುಂಬಿದ್ದು, ಅಲ್ಲದೆ ಸುಂದರವಾದ ಗಾಜಿನ ಮನೆ ಪಾರ್ಕ್ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಅಮಾನಿಕೆರೆಗೆ ಬಂದು ಉದ್ಯಾನವನದ ಸೌಂದರ್ಯ ಸವಿಯುತ್ತಿದ್ದರು. ಪ್ರವಾಸಿಗರ ಅನುಕೂಲಕ್ಕಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಕ್ಕಳ ಟ್ರೈನ್ ಮಾದರಿಯಲ್ಲಿ ಒಂದು ವಾಹನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು. ಈ ವಾಹನ ಪಾರ್ಕ್‍ನಲ್ಲಿ ಸಂಚರಿಸುತ್ತಾ ಪ್ರವಾಸಿಗರಿಗೆ ಪಾರ್ಕ್‍ನ ಸುತ್ತಾಡಿಸಿಕೊಂಡು ಬರಲಾಗುತ್ತಿತ್ತು.

ಎಂದಿನಂತೆ ನಿನ್ನೆ 14 ಮಂದಿಯನ್ನು ಹೊತ್ತು ತೆರಳುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು , ಎಲ್ಲರಿಗೂ ಗಂಭೀರ ಗಾಯಗಳಾಗಿವೆ. ಕೂಡಲೇ ಇವರನ್ನು ಸ್ಥಳೀಯ ಹಾಗೂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ನಗರ ಠಾಣೆಯ ವೃತ್ತ ನಿರೀಕ್ಷಕ ಗಂಗ ಲಿಂಗಯ್ಯ, ಸಂಚಾರಿ ಠಾಣೆಯ ಎಸ್‍ಐ ನಾಗಣ್ಣ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments