ಆಂಧ್ರದ ದೋಣಿ ದುರಂತದಲ್ಲಿ ಸತ್ತವರ ಸಂಖ್ಯೆ 20ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Andhra--01

ಅಮರಾವತಿ, ನ.13-ಆಂಧ್ರಪ್ರದೇಶದ ವಿಜಯವಾಡ ಬಳಿ ಕೃಷ್ಣ ನದಿಯಲ್ಲಿ ನಿನ್ನೆ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ಇಂದು ಬೆಳಗ್ಗೆ ಇನ್ನೂ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 20ಕ್ಕೇರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತ ಸ್ಪಂದನೆ ಪಡೆ (ಎನ್‍ಡಿಆರ್‍ಎಫ್) ಮತ್ತು ಅಗ್ನಿ ಶಾಮಕ ಸೇವೆಗಳ ಇಲಾಖೆ ಈ ಶವಗಳನ್ನು ನೀರಿನಿಂದ ಹೊರತೆಗೆದಿವೆ ಎಂದು ಇಲಾಖೆಯ ಮಹಾ ನಿರ್ದೇಶಕ ಎನ್. ಸತ್ಯನಾರಾಯಣ ತಿಳಿಸಿದ್ದಾರೆ.

ಇನ್ನೂ ನಾಲ್ವರು ನಾಪತ್ತೆಯಾಗಿರುವ ಶಂಕೆ ಇದ್ದು ಸ್ಕೂಬಾ ಡೈವಿಂಗ್ ಈಜು ಪರಿಣಿತರು ಶೋಧ ಮುಂದುವರಿಸಿದ್ದಾರೆ. 38 ಪ್ರವಾಸಿಗರಿದ್ದ ದೋಣಿಯು ನಿನ್ನೆ ಸಂಜೆ ವಿಜಯವಾಡ ಬಳಿ ಕೃಷ್ಣಾ ಮತ್ತು ಗೋದಾವರಿ ನದಿಗಳ ಪವಿತ್ರ ಸಂಗಮದ ಬಳಿ ಮುಗುಚಿ ದುರಂತ ಸಂಭವಿಸಿತ್ತು.

Facebook Comments

Sri Raghav

Admin