ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರೈತರ ಸಾಲ ಸಂಪೂರ್ಣ ಮನ್ನಾ

ಈ ಸುದ್ದಿಯನ್ನು ಶೇರ್ ಮಾಡಿ

turuve

ತುರುವೇಕೆರೆ, ನ.13- ಎಚ್.ಡಿ.ಕುಮಾರ್‍ಸ್ವಾಮಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಆದಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಟೊಂಕಕಟ್ಟಿ ದುಡಿಯಲಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಭೇಟೆರಾಯ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಜಾತ್ಯಾತೀತ ಜನತಾದಳ ಪಕ್ಷವು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿನ ಭಿನ್ನಮತೀಯ ನಾಯಕರುಗಳ ನಡುವಿನ ಆಂತರಿಕ ಕಿತ್ತಾಟಗಳ ಪರಿವರ್ತನಾ ರ‍್ಯಾಲಿಯಾಗಿದೆ ಎಂದು ಲೇವಡಿ ಮಾಡಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಕೇವಲ ದುರ್ಯೋಧನನ ಪಾತ್ರ ಮಾಡಿದರೆ ವಿನಃ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿಲ್ಲ. ಅನ್ಯಭಾಗ್ಯ ಯೋಜನೆಯೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಇವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಜೆಡಿಎಸ್ ವರಿಷ್ಟರಾದ ಎಚ್.ಡಿ ದೇವೇಗೌಡ ಹಾಗೂ ಕುಮಾರ್ ಸ್ವಾಮಿ ಅವರ ಸಾಧನೆಗಳ ಬಗ್ಗೆ ಕ್ಷೇತ್ರದ ಪ್ರತಿ ಮನೆಮನೆಗೆ ಮನವರಿಕೆ ಮಾಡಿಕೊಟ್ಟು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯ ಮಂತ್ರಿಗಳನ್ನಾಗಿಸುವುದೇ ನಮ್ಮ ಮುಂದಿನ ಗುರಿ ಎಂದರು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಜೆಡಿಎಸ್‍ಗೆ ನೂರಾರು ಕಾರ್ಯಕರ್ತರು ಸೇರ್ಪಡೆಗೊಂಡರು.

ತಾಪಂ ಸದಸ್ಯರಾದ ಸ್ವಾಮಿ, ದಂಡಿನಶಿವರ ಕುಮಾರ್, ಎಪಿಎಂಸಿ ಅಧ್ಯಕ್ಷ ನಾಗರಾಜು, ನಿರ್ದೇಶಕರುಗಳಾದ ನರಸಿಯಪ್ಪ, ಲೋಕೇಶ್, ಮುಖಂಡರುಗಳಾದ ವಕೀಲ ಧನಪಾಲ್, ರಾಜೀವ್‍ಕೃಷ್ಣಪ್ಪ, ದಂಡಿನಶಿವರ ಶಂಕರೇಗೌಡ, ಕೊಳಾಲಗಂಗಾದರ್, ರಾಜ್‍ಕುಮಾರ್, ಚಂದ್ರೇಶ್, ರವಿಕುಮಾರ್, ಮಹಮದ್ ಯೂಸಫ್, ನರಸಿಂಹ ಮೂರ್ತಿ, ನಾಗರಾಜು, ರಾಮಚಂದ್ರು, ಬಣ್ಣದಂಗಡಿ ರಂಗನಾಥ್, ಮಾಯಣ್ಣ ಗೌಡ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Facebook Comments

Sri Raghav

Admin