ಕೋರ್ಟ್ ಆವರಣದಲ್ಲೇ ರೌಡಿಗಳ ಗ್ಯಾಂಗ್‍ವಾರ್, ಒಬ್ಬ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gang-War--01

ನವದೆಹಲಿ, ನ.13-ರಾಜಧಾನಿ ನವದೆಹಲಿ ಮತ್ತೆ ಗ್ಯಾಂಗ್‍ವಾರ್‍ನಿಂದ ಬೆಚ್ಚಿ ಬಿದ್ದಿದೆ. ರೋಹಿಣಿ ಕೋರ್ಟ್ ಆವರಣದಲ್ಲೇ ಎರಡು ರೌಡಿಗಳ ಗುಂಪಿನ ನಡುವೆ ನಡೆದ ಭೀಕರ ಘರ್ಷಣೆ ಮತ್ತು ಫೈರಿಂಗ್‍ನಲ್ಲಿ ಒಬ್ಬ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್‍ಗೆ ಆರೋಪಿಯೊಬ್ಬನನ್ನು ಕರೆತಂದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗ್ಯಾಂಗ್‍ವಾರ್ ನಡೆಯಿತು. ಈ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಹಾರಿಸಿದ ಗುಂಡಿನಿಂದ ವ್ಯಕ್ತಿಯೊಬ್ಬ ಮೃತಪಟ್ಟ. ತಕ್ಷಣ ಕಾರ್ಯಪೃವೃತ್ತರಾದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿ ಒಬ್ಬನನ್ನು ಬಂಧಿಸಿದ್ದರು. ಈ ಘಟನೆ ನಂತರ ರೋಹಿಣಿ ಕೋರ್ಟ್ ಆವರಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ರೋಹಿಣಿ ಕೋರ್ಟ್ ಆವರಣದಲ್ಲಿ ಆಗಾಗ ರೌಡಿಗಳ ನಡುವೆ ಗ್ಯಾಂಗ್‍ವಾರ್ ನಡೆಯುತ್ತಲೇ ಇರುತ್ತವೆ. ಈ ವರ್ಷ ಏಪ್ರಿಲ್, ಮೇ ಮತ್ತು ಆಗಸ್ಟ್‍ನಲ್ಲಿ ನಡೆದ ರೌಡಿಗಳ ಕಾಳಗದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

Facebook Comments

Sri Raghav

Admin