ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

MR-Seetaraman--01

ಬೆಳಗಾವಿ, ನ.13- ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಈಗಾಗಲೇ ರಾಜೀನಾಮೆ ನೀಡಿದ್ದರು. ಈಗ ಮತ್ತೊಮ್ಮೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ಎಂ.ಆರ್.ಸೀತಾರಾಂ ಸ್ಪಷ್ಟಪಡಿಸಿದರು. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ. ಸಿಐಡಿ ಈ ಪ್ರಕರಣದಲ್ಲಿ ಕ್ಲೀನ್‍ಚಿಟ್ ಕೊಟ್ಟಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಸತ್ಯಾಂಶ ಹೊರಬರಲಿದೆ. ಅವರು ಮತ್ತೊಮ್ಮೆ ರಾಜೀನಾಮೆ ಕೊಡುವ ಅಗತ್ಯವೇನಿದೆ ಎಂದು ತಿಳಿಸಿದರು.

ಸಿಎಂ ವಿರುದ್ಧ ಈಶ್ವರಪ್ಪ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಯೋಚಿಸಿ ಮಾತನಾಡುವುದಿಲ್ಲ. ಮಾತನಾಡಿದ ಬಳಿಕ ಯೋಚಿಸುತ್ತಾರೆ. ಅವರ ಮಾತು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರ ಬಗ್ಗೆ ನಾನು ಮಾತನಾಡಿದರೆ ಅವರಿಗೂ ನನಗೂ ವ್ಯತ್ಯಾಸವಿರುವುದಿಲ್ಲ ಎಂದು ತಿಳಿಸಿದರು.

Facebook Comments

Sri Raghav

Admin