ನಮ್ಮ ನೆಲದಲ್ಲಿ ದಾವೂದ್‍ ಚಟುವಟಿಕೆ ನಡೆಸಲು ಬಿಡಲ್ಲ : ಭಾರತಕ್ಕೆ ಯುಎಇ ಆಶ್ವಾಸನೆ

ಈ ಸುದ್ದಿಯನ್ನು ಶೇರ್ ಮಾಡಿ

Dawood-Ibarhim

ದುಬೈ, ನ.13-ಪಾತಕಿ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಹೇಳಿರುವ ಸಂಯುಕ್ತ ಅರಬ್ ಗಣರಾಜ್ಯ (ಯುನೈಟೆಡ್ ಅರಬ್ ಎಮಿರೆಟ್ಸ್-ಯುಎಇ), ಭಾರತದಿಂದ ಈ ಸಂಬಂಧ ಗುಪ್ತಚರ ಮಾಹಿತಿ ಬಂದರೆ ಆತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿದ್ಧ ಎಂದು ಆಶ್ವಾಸನೆ ನೀಡಿದೆ.

ಪಾಕಿಸ್ತಾನದಲ್ಲಿ(ಕರಾಚಿ) ನೆಲೆ ಕಂಡುಕೊಂಡಿದ್ದಾನೆ ಎನ್ನಲಾದ ದಾವೂದ್‍ನ ಬಂಟರು ದುಬೈನಿಂದ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ತಡೆಯಲಾಗುವುದು ಹಾಗೂ ಆತನ ಜಾಲಕ್ಕೆ ಕಡಿವಾಣ ಹಾಕುವುದಾಗಿಯೂ ಯುಎಇ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2018ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಎರಡನೇ ಬಾರಿ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಉಭಯ ದೇಶಗಳ ವಾಣಿಜ್ಯ ಸಂಬಂಧ ವೃದ್ದಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಯಲಿದ್ದು, ಇದೇ ವೇಳೆ ಭಾರತ-ಯುಎಇ ಗುಪ್ತಚರ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಲು ಸಮ್ಮತಿ ಸೂಚಿಸಲಿದ್ದಾರೆ. ಇದರಿಂದ ದಾವೂದ್‍ಗೆ ಮತ್ತಷ್ಟು ಕಂಟಕ ಎದುರಾಗಲಿದೆ.

ಮುಂಬೈ ಸರಣಿ ಸ್ಫೋಟದ ಸೂತ್ರಧಾರ ದಾವೂದ್ ಇಬ್ರಾಹಿಂ ಬಂಟರು ವಾಣಿಜ್ಯ ನಗರಿ ಸೇರಿದಂತೆ ವಿವಿಧೆಡೆ ಸಕ್ರಿಯವಾಗಿದ್ದಾರೆ. ಅದರಲ್ಲೂ ಮುಂಬೈನಲ್ಲಿ ಪ್ರಾಬಲ್ಯ ಹೊಂದಿದ್ದು, ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಯುಎಇನಲ್ಲೂ ನಕಲಿ ಕಂಪನಿಗಳನ್ನು ಸೃಷ್ಟಿಸಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ.

Facebook Comments

Sri Raghav

Admin