ಫಿಲಿಪೈನ್ಸ್ ನಲ್ಲಿ ವಿಶ್ವ ಭತ್ತ ಸಂಶೋಧನಾ ಕೇಂದ್ರಕ್ಕೆ ಮೋದಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Rice--01

ಲಾಸ್ ಬ್ಯಾನೋಸ್(ಫಿಲಿಪೈನ್ಸ್), ನ.13-ದ್ವೀಪರಾಷ್ಟ್ರ ಫಿಲಿಪೈನ್ಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಲಾಸ್ ಬ್ಯಾನೋಸ್‍ನಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ (ಐಆರ್‍ಆರ್‍ಐ) ಭೇಟಿ ನೀಡಿ, ವಿಶ್ವವಿಖ್ಯಾತ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿದರು. ರಾಜಧಾನಿ ಮನಿಲಾದಿಂದ 65 ಕಿ.ಮೀ.ದೂರದಲ್ಲಿರುವ ಈ ಪಟ್ಟಣದಲ್ಲಿದೆ ಐಆರ್‍ಆರ್‍ಐ. ಆಹಾರ ಕೊರತೆ ನೀಗಿಸಲು ಉತ್ತಮ ದರ್ಜೆಯ ಭತ್ತವನ್ನು ಅಭಿವೃದ್ದಿಗೊಳಿಸಲು ಶ್ರಮಿಸುತ್ತಿರುವ ಈ ಸಂಸ್ಥೆಯಲ್ಲಿ ಅನೇಕ ಭಾರತೀಯ ವಿಜ್ಞಾನಿಗಳೂ ಇದ್ದಾರೆ. ಈ ಕೇಂದ್ರಕ್ಕೆ ಫಿಲಿಪೈನ್ಸ್‍ನ ನ್ನತಾಧಿಕಾರಿಗಳೊಂದಿಗೆ ಭೈೀಟಿ ನೀಡಿದ ಮೋದಿ ಇಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರವಾಹ ಸಂಯಮಿ (18 ದಿನ ನೀರಿನಲ್ಲಿದ್ದರೂ ಕೊಳೆಯುವುದಿಲ್ಲ) ಭತ್ತದ ತಳಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

Facebook Comments

Sri Raghav

Admin