ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್ ಗೆ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

MES--01

ಬೆಳಗಾವಿ(ಸುವರ್ಣಸೌಧ), ನ.13- ಎಂದಿನಂತೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗುವ ದಿನ ಎಂಇಎಸ್ ನವರು ನಡೆಸುವ ಮಹಾಮೇಳಾವ್ ಕ್ಕೆ ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರದ ಎಂಇಎಸ್ ಮುಖಂಡರು, ಅಲ್ಲಿನ ವಿವಿಧ ರಾಜಕೀಯ ನೇತಾರರು ಬೆಳಗಾವಿ ಪ್ರವೇಶಿಸುವುದಕ್ಕೆ ನಿಷೇಧ ಹೇರಿದೆ.

ಮಹಾಮೇಳಾಕ್ಕೆ ಯಾವುದೇ ರೀತಿಯ ಅನುಮತಿ ಅಧಿಕೃತವಾಗಿ ನೀಡದೇ ಇದ್ದರೂ ಸಹ ಎಂಇಎಸ್ ಶಾಸಕ ಸಂಭಾಜಿ ಪಾಟೀಲ, ಅರವಿಂದ ಪಾಟೀಲ, ದೀಪಕ ದಳವಿ ನೇತೃತ್ವದಲ್ಲಿ ಇಲ್ಲಿನ ಟಿಳಕವಾಡಿ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಮೇಳಾ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಇಂದಿನಿಂದ ನಾಳೆ ಮಧ್ಯರಾತ್ರಿವರೆಗೆ ಯಾವುದೇ ಮಹಾರಾಷ್ಟ್ರದ ರಾಜಕೀಯ ಮುಖಂಡರು ಕರ್ನಾಟಕದೊಳಕ್ಕೆ ಪ್ರವೇಶಿಸದಂತೆ ನಿರ್ಬಂಧ ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಸೇಖರ್ ಪಾಟೀಲ, ವಿಪಕ್ಷ ನಾಯಕ ಧನಂಜಯ ಮುಂಡೆ ಮತ್ತಿತರರು ಇಂದಿನ ಮೇಳಾವದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಗಡಿ ಭಾಗವಾದ ಕಾಗವಾಡ ಹೊರವೊಲಯದ ಕೊಗನೊಳ್ಳಿ ಚಡಕ್ ಪೋಸ್ಟ್ ಹತ್ತಿರ ಖಾಕಿ ಕೋಟೆಯೇ ನಿರ್ಮಾಣವಾಗಿದೆ. ಮಹಾರಾಷ್ಟ್ರದಿಂದ ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿತ್ತು.

ರಾರಾಜಿಸದ ಬ್ಯಾನರ್, ಬಂಟಿಂಗ್ಸ್ :

ಈ ಹಿಂದೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಗೊಂಡಾಗಿನಿಂದ ಕಳೆದ ವರ್ಷದವರೆಗೂ ಬೆಳಗಾವಿ ನಗರದಲ್ಲಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ನಾಯಕರಿಗೆ ಶುಭ ಸ್ವಾಗತ ಕೋರುವ ಬ್ಯಾನರ್, ಬಂಟಿಂಗ್ಸ್‍ಗಳ ಭರಾಟೆಯೇ ಕಂಡು ಬರುತ್ತಿತ್ತು.  ಆದರೆ, ಈ ಬಾರಿಯ ಅಧಿವೇಶನಕ್ಕೆ ಅಂತಹ ಭರಾಟೆ ಕಾಣಲಿಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಕಾಂಗ್ರೆಸ್ ಮುಖಂಡರಿಗೆ ಸ್ವಾಗತ ಕೋರುವ ಮಹಾನಗರ ವ್ಯಾಪ್ತಿಗೆ ಸೇರಿದ ಹೋರ್ಡಿಂಗ್ಸ್ ತಲೆ ಎತ್ತಿದ್ದವು. ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ನಾಳೆ ಬೆಳಗಾವಿಯಲ್ಲಿ ನಡೆಯುವ ಜೆಡಿಎಸ್ ನ ಕುಮಾರ ಪರ್ವ ಸಮಾವೇಶದ ಬ್ಯಾನರ್ ಕಂಡುಬಂದಿತು.

Facebook Comments

Sri Raghav

Admin