ಬ್ರಿಟನ್ ಪ್ರಧಾನಿ ಥೆರೇಸಾ ಮೇ ವಿರುದ್ಧ 40 ಸಂಸದರು ಬಂಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Theresa-May--02

ಲಂಡನ್, ನ.13-ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ಮೇ ವಿರುದ್ಧದ ಅವಿಶ್ವಾಸ ಪತ್ರಕ್ಕೆ ಅವರ ಕನ್ಸರ್‍ವೇಟಿವ್ ಪಕ್ಷದ 40 ಸಂಸದರು ಸಹಿ ಮಾಡಲು ಸಮ್ಮತಿ ನೀಡಿದ್ದು, ಆಂತರಿಕ ಬಿಕ್ಕಟ್ಟು ಎದುರಾಗಿದೆ. ಈ ಸಂಖ್ಯೆಯ ಪಕ್ಷದ ನಾಯಕತ್ವ ಬದಲಾವಣೆಗೆ ಅಗತ್ಯವಾಗಿರುವ ಸಂಖ್ಯೆಗಿಂತ ಎಂಟರಷ್ಟು ಕಡಿಮೆಯಾಗಿದೆ. ಜೂನ್ 8ರಂದು ನಡೆದ ಮಧ್ಯಂತರ ಚುನಾವಣೆ ಬಳಿಕ ಪಕ್ಷದ ಮೇಲೆ ಹಿಡಿತ ಸಾಧಿಸಲು ಥೆರೇಸಾ ಮೇ ಪರದಾಡುತ್ತಿರುವಾಗಲೇ ಈ ಬೆಳವಣಿಗೆ ಕಂಡುಬಂದಿದೆ.

ಹೆಚ್ಚಿನ ಬಹುಮತ ಗೆಲ್ಲಬಹುದೆಂಬ ನಿರೀಕ್ಷೆಯಿಂದ ಅವರು ಚುನಾವಣೆಯನ್ನು ನಡೆಸಿದ್ದರು. ಆದರೆ, ಆ ಚುನಾವಣೆಯಲ್ಲಿ ಅವರಿಗೆ ಮುಖಭಂಗವಾಗಿ ತಮಗೆ ಇರುವ ಬಹುಮತವನ್ನೂ ಅವರು ಕಳೆದುಕೊಂಡಿದ್ದರು. ಯೂರೋಪ್ ಸಮುದಾಯದಿಂದ ಬ್ರಿಟನ್‍ನನ್ನು ಪ್ರತ್ಯೇಕಗೊಳಿಸಬೇಕೆಂಬ ವಿಷಯದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯ ಮತ್ತು ತಮ್ಮ ಸಚಿವರ ಹಗರಣಗಳ ಹಿನ್ನೆಲೆಯಲ್ಲಿ, ಮೇ ನೇತೃತ್ವದ ಸರ್ಕಾರವು ಸ್ಥಿರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಈ ಬೆಳವಣಿಗೆಗಳು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನ-ಬ್ರೆಕ್ಸಿಟ್ ಮಾತುಕತೆಯಲ್ಲಿ ಇಂಗ್ಲೆಂಡ್ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

Facebook Comments

Sri Raghav

Admin