ಮುಷ್ಕರ ನಿರತ ವೈದ್ಯರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

CM-Meet--02

ಬೆಳಗಾವಿ. ನ.13 : ಮುಷ್ಕರ ನಿರತ ವೈದ್ಯರ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುವರ್ಣ ಸೌಧದ ಕೊಠಡಿ ಸಂಖ್ಯೆ: 145 ರಲ್ಲಿ ಸಭೆ ನಡೆಸಿದರು. ‘ನಿಮಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಹೀಗಾಗಿ ಮುಷ್ಕರ ವಾಪಸ್ ಪಡೆದುಕೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯರಿಗೆ ಮನವಿ ಮಾಡಿದ್ದಾರೆ.

ಮುಷ್ಕರ ನಿರತ ವೈದ್ಯ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಈ ಮನವಿ ಮಾಡಿದರು. ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿರುವ ವಿಧೇಯಕ ಕುರಿತು ಯಾವುದೇ ಭಯ ಬೇಡ. ವೈದ್ಯರಿಗೆ ತೊಂದರೆ ಅಥವಾ ಕಿರುಕುಳ ನೀಡಲು ಸರ್ಕಾರ ವಿಧೇಯಕ ರೂಪಿಸಿಲ್ಲ.

ಆದರೂ ವಿಧೇಯಕ ಮಂಡನೆಗೆ ಮುನ್ನ ಆರೋಗ್ಯ ಸಚಿವರೊಂದಿಗೆ. ಪದಾಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿಯವರು ಹೇಳಿದರು.  ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊಸದಾಗಿ ಕಾನೂನು ಜಾರಿಗೆ ತರಲು ಮುಂದಾಗಿದೆ. ವೈದ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ. ವೈದ್ಯರನ್ನು ನಿಯಂತ್ರಿಸುವ ಉದ್ದೇಶವೂ ನಮಗಿಲ್ಲ. ಹೀಗಾಗಿ ಮುಷ್ಕರ ವಾಪಸ್ ಪಡೆಯಿರಿ ಎಂದು ಸಿಎಂ ಮನವಿ ಮಾಡಿದರು.

Facebook Comments

Sri Raghav

Admin