ಸಿಕ್ಕ ಸಿಕ್ಕಲ್ಲಿ ಕಸ ಹಾಕುವ ಸಾರ್ವಜನಿಕರ ವಿರುದ್ಧ ಪಾಲಿಕೆ ಸದಸ್ಯ ಪ್ರತಿಭಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Pro

ಮೈಸೂರು,ನ.13- ಎಷ್ಟೇ ಹೇಳಿದರೂ ಸಾರ್ವಜನಿಕರು ಸಿಕ್ಕ ಸಿಕ್ಕ ಜಾಗದಲ್ಲಿ ಕಸ ಹಾಕುತಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರೊಬ್ಬರು ಕಸದ ನಡುವೆಯೇ ಕುಳಿತು ಪ್ರತಿಭಟನೆ ನಡಸಿದ ಪ್ರಸಂಗ ನಡೆಯಿತು. ನಗರದ ವಿದ್ಯಾರಣ್ಯಪುರದಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ಸಾರ್ವಜನಿಕರು ಕಸವನ್ನು ಹಾಕುತ್ತಿದರು. ಈ ಬಗ್ಗೆ ವಾರ್ಡ್ ನಂ. 10ರ ಪಾಲಿಕೆ ಸದಸ್ಯ ಸುನೀಲ್ ಹಲವು ಭಾರಿ ಸಾರ್ವಜನಿಕರಿಗೆ ಕಸ ಹಾಕದಂತೆ ಮನವಿ ಮಾಡಿದ್ದರು ಹಾಗೂ ಹಲವು ಭಾರಿ ಕಸವನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಸಹ ಹಾಕಿದ್ದರು.

ರಂಗೋಲಿ ಹಾಕಿ ಎರಡು ದಿನ ಆದ ನಂತರ ಸಾರ್ವಜನಿಕರು ಮತ್ತೆ ಕಸವನ್ನು ತಂದು ಹಾಕುತ್ತಿದ್ದರು. ಇದರಿಂದ ಬೆಸತ್ತ ಸದಸ್ಯ ಸುನೀಲ್ ಇಂದು ಬೆಳಗ್ಗೆ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಒಬ್ಬರೆ ಕಸದ ನಡುವೆ ಪ್ರತಿಭಟನೆಗೆ ಕುಳಿತರು. ಇದನ್ನು ನೋಡಿದ ಅಲ್ಲಿನ ಸಾರ್ವಜನಿಕರು ಕೂಡ ಇವರೊಂದಿಗೆ ಕೈಜೋಡಿಸಿ ಪ್ರತಿಭಟನೆಗೆ ಸಹಕಾರ ನೀಡಿದರು.

Facebook Comments

Sri Raghav

Admin