ಸುವರ್ಣಸೌಧದಲ್ಲಿ ಕರ್ತವ್ಯನಿರತ ಕಾನ್‍ಸ್ಟೆಬಲ್‍ ಹೃದಯಾಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dead-Body--01

ಬೆಳಗಾವಿ(ಸುವರ್ಣಸೌಧ), ನ.13- ವಿಧಾನಮಂಡಲದ ಅಧಿವೇಶನದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್‍ಆರ್‍ಪಿ ತುಕಡಿಯ ಕಾನ್‍ಸ್ಟೆಬಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಕಾನ್‍ಸ್ಟೆಬಲ್‍ರನ್ನು ಶಿವಮೊಗ್ಗ ಕೆಎಸ್‍ಆರ್‍ಪಿ ತುಕಡಿಯ ಸಿಬ್ಬಂದಿ ತಿಪ್ಪೇಸ್ವಾಮಿ(57) ಎಂದು ಗುರುತಿಸಲಾಗಿದೆ. ಸುವರ್ಣವಿಧಾನಸೌಧದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್‍ಆರ್‍ಪಿ ತುಕಡಿಗೆ ಖಾನಾಪುರ ಪಂಚಾಯ್ತಿ ಕಲ್ಯಾಣಮಂಟಪದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಭದ್ರತೆಗಾಗಿ ನಿನ್ನೆಯೇ ಬೆಳಗಾವಿಗೆ ಆಗಮಿಸಿದ್ದ ತುಕಡಿ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟಿದ್ದ ವೇಳೆ ತಿಪ್ಪೇಸ್ವಾಮಿಗೆ ಹೃದಯಾಘಾತವಾಗಿದೆ. ತಕ್ಷಣ ಸಹೋದ್ಯೋಗಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments