ಹಸು ಸತ್ತರೆ ಪರಿಹಾರ ನೀಡುವ ಸರ್ಕಾರ ಎಮ್ಮೆ ಸತ್ತರೆ ಏಕೆ ನೀಡುವುದಿಲ್ಲ..?

ಈ ಸುದ್ದಿಯನ್ನು ಶೇರ್ ಮಾಡಿ

Umesh-Katti---01 ಬೆಳಗಾವಿ, ನ.13- ಹಸು ಸತ್ತರೇ ಪರಿಹಾರ ಇದೆ. ಎಮ್ಮೆ ಸತ್ತರೆ ಪರಿಹಾರ ಇಲ್ಲ. ಈ ಸರ್ಕಾರದ ಧೋರಣೆ ಆಗಿದೆ. ಸರ್ಕಾರದ ಅಧಿಕಾರಿಗಳು ಅದೇ ರೀತಿ ಇದ್ದಾರೆ ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಅಸಮಾಧಾನ ವ್ಯಕ್ತಪಡಿಸಿದರು. ಸುವರ್ಣ ಸೌಧದಲ್ಲಿ ಅಧಿವೇಶನದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳು ನಡೆಯುವ ವಿಶ್ವಾಸವಿದೆ. ಅಂತಹ ಚರ್ಚೆಗಳು ನಡೆಯಬೇಕು. ಈ ಭಾಗದ ವಿಷಯಗಳಿಗೆ ಹೆಚ್ಚು ಒತ್ತು ಸಿಗಬೇಕು. ಇಲ್ಲದೇ ಹೋದರೆ ಅಧಿವೇಶನ ಅರ್ಥ ಕಳೆದುಕೊಳ್ಳುತ್ತದೆ ಎಂದರು.

ಬರ, ನೆರೆ ಪರಹಾರ ವಿಷಯದಲ್ಲೂ ಸಾಕಷ್ಟು ಗೊಂದಲಗಳಿವೆ. ಹಸು ಸತ್ತಾಗ ಪರಿಹಾರ ಕೊಡುವ ಸರ್ಕಾರ ಎಮ್ಮೆ ಸತ್ತಾಗ ಪರಿಹಾರ ನೀಡಲು ಅವಕಾಶ ಇಲ್ಲ ಎನ್ನನುತ್ತದೆ. ಬೆಳಗಾವಿ ಭಾಗದಲ್ಲಿ ಎಮ್ಮೆಗಳ ಸಂಖ್ಯೆ ಹೆಚ್ಚಿವೆ. ಸರ್ಕಾರದ ನಿಯಮಾವಳಿಗಳಲ್ಲಿ ತಿದ್ದುಪಡಿಯಾಗಬೇಕು ಎಂದು ಹೇಳಿದರು.

Facebook Comments

Sri Raghav

Admin