ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆ ಜಾರಿಯಾದರೆ ನ್ಯಾಯಾಲಯದ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

TBJ

ತುಮಕೂರು, ನ.13-ಇಂದಿರಾ ಸಹಾನಿ ಆಯೋಗದ ಶಿಫಾರಸ್ಸಿನಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಅನುಷ್ಠಾನ ಗೊಳಿಸುವಲ್ಲಿ ಕಾಂಗ್ರೆಸ್ ವಿರೋಧವಿಲ್ಲ. ತಿದ್ದುಪಡಿ ಮಾಡಿರುವ ಆಯೋಗದ ಕಾಯ್ದೆಯನ್ನು ಜಾರಿ ಗೊಳಿಸಿದರೆ, ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಎಂದು ಹೇಳಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಏ. 5ರಂದು ಈ ವರದಿಯನ್ನು ತಿದ್ದುಪಡಿ ಮಾಡಿ, ಲೋಕಸಭೆಯಲ್ಲಿ ಅನುಮತಿ ಪಡೆದಿರುವ ಪ್ರಧಾನಿ ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ರಾಜ್ಯಸಭೆಯಲ್ಲಿ ಅನುಮತಿಗೆ ಅವಕಾಶ ನೀಡುವುದಿಲ್ಲ. ತಿದ್ದುಪಡಿ ವರದಿ ಅನುಷ್ಠಾನಗೊಂಡರೆ ಯಾವುದೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರುವ ಸಣ್ಣ, ಪುಟ್ಟ ಜಾತಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ರಾಜ್ಯ ಸರ್ಕಾರದ ಹಕ್ಕನ್ನು ಮೊಟಕು ಗೊಳಿಸಲಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇನ್ನೂ ಎಷ್ಟೋ ಸಣ್ಣ, ಪುಟ್ಟ ಜಾತಿಗಳು ಜಾತಿ ಪಟ್ಟಿಗೆ ಸೇರಿಲ್ಲ. ಅಂತಹ ಜಾತಿಗಳ ಹಿತ ರಕ್ಷಿಸುವುದು ಸರ್ಕಾರದ ಉದ್ದೇಶ ಎಂದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚಿಸಲು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಪ್ರಧಾನಿ ಮೋದಿ ಹೋದ ಮತ್ತು ಬಂದ ಕಡೆಯಲ್ಲಿ ಬಿಂಬಿಸುವದರಲ್ಲಿ ಅರ್ಥವಿಲ್ಲ. ತಿದ್ದುಪಡಿ ಶಿಫಾರಸ್ಸು ಅನುಷ್ಠಾನಕ್ಕೆ ಬಂದರೆ ಪ್ರತಿ ರಾಜ್ಯ ಆಯೋಗದ ಮುಂದೆ ಕೈಕಟ್ಟಿ ನಿಂತು ಆಯಾ ರಾಜ್ಯದ ಹಿಂದುಳಿದವರ ಹಿತ ರಕ್ಷಿಸಲು ಅನುಮತಿ ಬೇಡಬೇಕಾಗುತ್ತದೆ. ಲೋಕಸಭೆ ಜಂಟಿ ಸದನ ಸಮಿತಿ ಕರ್ನಾಟಕ ಸರ್ಕಾರದ ನಿಲುವನ್ನು ಬೆಂಬಲಿಸಿದೆ. ಆದ್ಧರಿಂದ ಕೇಂದ್ರ ಸರ್ಕಾರ ತನ್ನ ಹಠವನ್ನು ಬಿಟ್ಟು ಇಂದಿರಾ ಸಹಾನಿ ಅಧ್ಯಕ್ಷತೆಯಲ್ಲಿ ನೀಡಿರುವ ವರದಿಯನ್ನು ಆಯೋಗದ ಮೂಲಕ ಅನುಷ್ಠಾನಗೊಳಿಸಬೇಕು. ಇಲ್ಲವಾದರೆ, ಕಾನೂನು ಸಮರ ಅನಿವಾರ್ಯ ಎಂದು ಎಚ್ಚರಿಸಿದರು.

Facebook Comments

Sri Raghav

Admin