ಅಫ್ಘಾನ್ ನಲ್ಲಿ ಉಗ್ರರು-ಪೊಲೀಸರ ನಡುವೆ ಗುಂಡಿನ ಕಾಳಗ : 70ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Taliban--02

ಕಾಬೂಲ್, ನ.14-ಸಮರ ಸಂತ್ರಸ್ತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ದಕ್ಷಿಣ ಕಂದಹಾರ್‍ನ 15 ಭದ್ರತಾ ಠಾಣೆಗಳ ಮೇಲೆ ಉಗ್ರರು ನಡೆಸಿದ ದಾಳಿ ಬಳಿಕ ಭೀಕರ ಗುಂಡಿನ ಕಾಳಗದಲ್ಲಿ 70ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.  ಉಗ್ರರ ದಾಳಿಯಲ್ಲಿ 22 ಪೊಲೀಸರು ಹತರಾಗಿ, 15 ಮಂದಿ ಗಾಯಗೊಂಡರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು 45 ತಾಲಿಬಾನ್ ಬಂಡುಕೋರರನ್ನು ಕೊಂದರು, ಅಲ್ಲದೇ 36 ಉಗ್ರರು ತೀವ್ರ ಗಾಯಗೊಂಡಿದ್ಧಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin