ಉಗ್ರರ ವಲಯ ತೆರವುಗೊಳಿಸುವಂತೆ ಪಾಕ್‍ಗೆ ಭಾರತ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism

ಜಿನಿವಾ, ನ.14-ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ತನ್ನ ಅಕ್ರಮ ಮತ್ತು ಬಲವಂತದ ಸ್ವಾಧೀನವನ್ನು ಕೊನೆಗೊಳಿಸುವಂತೆ ಪಾಕ್‍ಗೆ ತಾಕೀತು ಮಾಡಿರುವ ಭಾರತ, ಭಯೋತ್ಪಾದಕರ ವಿಶೇಷ ವಲಯಗಳನ್ನು ತೆರವು ಮಾಡಬೇಕೆಂದು ಆಗ್ರಹಪಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‍ಎಚ್‍ಆರ್‍ಸಿ) ಮುಂದೆ ಪಾಕಿಸ್ತಾನದ ತೃತೀಯ ಜಾಗತಿಕ ನಿಯತ ಪರಾಮರ್ಶೆ(ಯುಪಿಆರ್) ಮಂಡಿಸಲಾಗಿದ್ದು, ಭಾರತ ಕೆಲವೊಂದು ಶಿಫಾರಸುಗಳನ್ನು ಮಾಡಿದೆ. ಪಾಕಿಸ್ತಾನವು ಪಿಒಕೆಯಲ್ಲಿ ತನ್ನ ಕಾನೂನುಬಾಹಿರ ಅಧಿಭೋಗವನ್ನು ಕೊನೆಗಾಣಿಸುವ ಮೂಲಕ ಅಲ್ಲಿನ ಜನರಿಗೆ ಸ್ವಾತಂತ್ರ ನೀಡಬೇಕು, ಭಯೋತ್ಪಾದನೆ ವಲಯಗಳನ್ನು ತೆರವುಗೊಳಿಸಬೇಕು ಹಾಗೂ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಬೇಕು-ಇವೇ ಮೊದಲಾದ ಬೇಡಿಕೆಗಳುಳ್ಳ ಶಿಫಾರಸುಗಳನ್ನು ಭಾರತ ವಿಶ್ವಸಂಸ್ಥೆಗೆ ಸಲ್ಲಿಸಿದೆ.

Facebook Comments

Sri Raghav

Admin