ಕಲ್ಲಂಗಡಿ ಹಣ್ಣಿನಿಂದ ಖುಲಾಯಿಸಿತು ಅದೃಷ್ಟ..! ಸಣ್ಣ ಗಾಯಕ್ಕೆ ಸಿಕ್ತು 49 ಕೋಟಿ ರೂ. ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

Walmart--02

ನ್ಯೂಯಾರ್ಕ್, ನ.14-ಪ್ರತಿಷ್ಠಿತ ವಾಲ್‍ಮಾರ್ಟ್ ಮಳಿಗೆಯಲ್ಲಿ ಕಲ್ಲಂಗಡಿ ಖರೀದಿಸುವ ಸಂದರ್ಭದಲ್ಲಿ ಬೆನ್ನಿನ ಕೆಳಭಾಗಕ್ಕೆ ಗಾಯವಾಗಿದ್ದ 61 ವರ್ಷದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವೊಂದು 7.5 ದಶಲಕ್ಷ ಡಾಲರ್ (49 ಕೋಟಿ ರೂ.ಗಳ) ಪರಿಹಾರ ನೀಡುವಂತೆ ಆದೇಶ ನೀಡಿದೆ.

ಕಲ್ಲಂಗಡಿ ತಂದ ಆಪತ್ತು :

ಹೆನ್ರಿ ವಾಕರ್ ಕಲ್ಲಂಗಡಿ ಹಣ್ಣು ಖರೀದಿಸಲು 2015ರಲ್ಲಿ ನ್ಯೂಯಾರ್ಕ್‍ನ ವಾಲ್‍ಮಾರ್ಟ್ ಮಳಿಗೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಪೆಟ್ಟಿಗೆಯ ಅಡಿ ಇದ್ದ ಜಾಹೀರಾತು ಹಲಗೆ ಅವರ ಕಾಲಿಗೆ ಸಿಲುಕಿದ ಪರಿಣಾಮ ಅವರು ಕೆಳಗೆ ಬಿದ್ದು ಗಾಯಗೊಂಡಿದ್ದರು. ವಾಲ್‍ಮಾರ್ಟ್ ಮಳಿಗೆಯವರು ಪೆಟ್ಟಿಗೆಯ ಹಲಗೆಯನ್ನು ಸರಿಯಾಗಿ ಮುಚ್ಚದ ಕಾರಣ ಹೆನ್ರಿ ಗಾಯಗೊಂಡಿದ್ದು, ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರ ಪರ ವಕೀಲರು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು.

ಆದರೆ, ಜಾಹೀರಾತು ಫಲಕ ಅಪಾಯಕಾರಿ ಸ್ಥಿತಿಯಲ್ಲಿ ಇರಲಿಲ್ಲ. ಗ್ರಾಹಕನ ಬೇಜವಾಬ್ದಾರಿಯಿಂದ ಇದು ಸಂಭವಿಸಿದೆ. ಇದಕ್ಕೆ ಆತನೇ ಕಾರಣ ಎಂದು ವಾಲ್‍ಮಾರ್ಟ್ ವಾದ ಮಂಡಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ವಾಕರ್ ಪರ ತೀರ್ಪು ನೀಡಿದೆ. ಅವರಿಗೆ 7.5 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ ತೀರ್ಪಿನಿಂದ ಅಸಮಾಧಾನಗೊಂಡಿರುವ ವಾಲ್‍ಮಾರ್ಟ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

Facebook Comments

Sri Raghav

Admin