ಕಾಲ್ ಸೆಂಟರ್ ಮೂಲಕ ಅವ್ಯವಹಾರ : ಭಾರತೀಯ ಮೂಲದ ಅಮೆರಿಕ ಪ್ರಜೆ ದೋಷಿ

ಈ ಸುದ್ದಿಯನ್ನು ಶೇರ್ ಮಾಡಿ

CaLL-saENTAR--01 ವಾಷಿಂಗ್ಟನ್, ನ.14-ಕಾಲ್ ಸೆಂಟರ್ ಮೂಲಕ ಭಾರೀ ಪ್ರಮಾಣದ ಹಣಕಾಸು ಅವ್ಯವಹಾರ ನಡೆಸಿದ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ದೋಷಿ ಎಂದು ಪರಿಗಣಿಸಲಾಗಿದೆ. ಇಲಿನೋಯ್ಸ್ ನಿವಾಸಿ ಮಿತೇಶ್‍ಕುಮಾರ್ ಪಟೇಲ್(42) ಹಾಗೂ ಇತ್ತೀಚೆಗಷ್ಟೇ ಇದೇ ಆರೋಪದ ಮೇಲೆ ಅಪರಾಧಿಗಳಾಗಿ ಘೋಷಿಸಲ್ಪಟ್ಟ ಇತರ ಆರು ತಪ್ಪಿಸ್ಥರ ವಿರುದ್ಧ ಅಮೆರಿಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ.  ಟೆಕ್ಸಾಸ್‍ನ ಸನ್ನಿ ಜೋಷಿ ಮತ್ತು ರಾಜೇಶ್ ಭಟ್, ಅಲಾಬಾಮಾದ ಜಗದೀಶ್ ಕುಮಾರ್ ಚೌಧರಿ, ಅರಿಜೋನಾದ ರಮಣ್ ಪಟೇಲ್, ಫ್ಲಾರಿಡಾದ ಪ್ರಫುಲ್ ಪಟೇಲ್ ಹಾಗೂ ಕ್ಯಾಲಿಫೋರ್ನಿಯಾದ ಜೆರ್ರಿ ನೋರಿಸ್ ಇತರ ಆರು ದೋಷಿಗಳು.

ಭಾರತೀಯ ಮೂಲದ ಕಾಲ್ ಸೆಂಟರ್ ಮೂಲಕ ಟೆಲಿಫೋನ್ ಕರೆ ಮಾಡಿ ವಂಚನೆ ಎಸಗಿದ್ದಲ್ಲದೇ. ಭಾರೀ ಪ್ರಮಾಣದ ಹಣ ದುರ್ವ್ಯವಹಾರವನ್ನೂ ನಡೆಸಿರುವ ಆರೋಪಗಳು ಸಾಬೀತಾಗಿದೆ. ಇವರ ವಿರುದ್ದ ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.

Facebook Comments

Sri Raghav

Admin