ಗುರುವಾಯೂರಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

RSS-Worker--01

ತ್ರಿಶ್ಯೂರ್, ನ.14-ವಿಶ್ವವಿಖ್ಯಾತ ಗುರುವಾಯೂರು ದೇವಸ್ಥಾನದ ಬಳಿ ನೆನ್‍ಮೆನಿಯಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮುಂಜಾನೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೋಟಾರ್ ಸೈಕಲ್‍ನಲ್ಲಿ ಹೋಗುತ್ತಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಆನಂದನ್(23) ಅವರನ್ನು ನ.12ರಂದು ಕಾರಿನಲ್ಲಿ ಹಿಂಬಾಲಿಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದ ಫೈಜ್, ಕಾರ್ತಿಕ್ ಮತ್ತು ಜೀತೇಶ್ ಬಂಧಿತ ಆರೋಪಿಗಳು.

ನಾಲ್ಕು ವರ್ಷಗಳ ಹಿಂದೆ ಫಜಿಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಆನಂದನ್ ಆರೋಪಿಯಾಗಿದ್ದ. ಆತನ ತಮ್ಮ ಫೈಜ್ ಮತ್ತು ಸಹಚರರು ಸೇಡು ತೀರಿಸಿಕೊಳ್ಳಲು ಆನಂದನ್‍ನನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Facebook Comments

Sri Raghav

Admin