ಜಪಾನ್, ಆಸ್ಟ್ರೇಲಿಯಾ, ವಿಯೆಟ್ನಾಂ ಪ್ರಧಾನಿಗಳ ಜೊತೆ ಮೋದಿ ಮಹತ್ವದ ದ್ವಿಪಕ್ಷೀಯ ಚರ್ಚೆ

Mopdi--0-3

ಮನಿಲಾ, ನ.14-ಆಸಿಯಾಸ್ ದೇಶಗಳ ಶೃಂಗಸಭೆಗಾಗಿ ಫಿಲಿಪೈನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್, ಆಸ್ಟ್ರೇಲಿಯಾ ಮತ್ತು ವಿಯೆಟ್ನಾಂನ ತಮ್ಮ ಸಹವರ್ತಿಗಳೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು.  ಆ ಮೂರು ದೇಶಗಳ ಪ್ರಧಾನಮಂತ್ರಿಗಳಾದ ಶಿಂಜೋ ಅಬೆ, ಮ್ಯಾಕ್ಲಮ್ ಟರ್ನ್‍ಬುಲ್ ಮತ್ತು ನ್ಯೂಗುಯೆನ್ ಕ್ಸುಆನ್ ಫುಕ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಮೋದಿ, ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿನ ಭದ್ರತಾ ಸನ್ನಿವೇಶಗಳೂ ಸೇರಿದಂತೆ ಪರಸ್ಪರ ಮಹತ್ವದ ಹಿತಾಸಕ್ತಿಯ ವಿವಿಧ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು.

ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಜಪಾನ್, ಆಸ್ಟ್ರೇಲಿಯಾ ಮತ್ತು ವಿಯೆಟ್ನಾಂ ಪ್ರಧಾನಮಂತ್ರಿಗಳ ಜೊತೆ ಮೋದಿ ಭೇಟಿ, ಚೀನಾ ಸೃಷ್ಟಿಸಿರುವ ಆತಂಕದ ಸನ್ನಿವೇಶದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಏಷ್ಯಾ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಇದೇ ಶೃಂಗಸಭೆ ಸಂದರ್ಭದಲ್ಲಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಚರ್ಚೆ ನಡೆಸಿ ಚೀನಾಗೆ ಸಡ್ಡು ಹೊಡೆದ ಬೆನ್ನಲ್ಲೇ ಭಾರತಕ್ಕೆ ಇನ್ನೆರಡು ದೇಶಗಳಿಂದ ಬೆಂಬಲ ವ್ಯಕ್ತವಾಗಿದೆ.

Facebook Comments

Sri Raghav

Admin