ತಾಜ್ ಪರಿಸರ ರಕ್ಷಣೆಗೆ ಬದ್ಧವಿರುವುದಾಗಿ ಸುಪ್ರೀಂಗೆ ಯುಪಿ ಸರ್ಕಾರ ಆಶ್ವಾಸನೆ

ಈ ಸುದ್ದಿಯನ್ನು ಶೇರ್ ಮಾಡಿ

taj-mahal

ನವದೆಹಲಿ, ಜ.14-ವಿಶ್ವವಿಖ್ಯಾತ ತಾಜ್ ಮಹಲ್ ಮತ್ತು ತಾಜ್ ಟ್ರಾಪೆಜಿಯಂ ಜೋನ್ (ಟಿಟಿಝಡ್) ಸುತ್ತಮುತ್ತಲ ಪರಿಸರ ಸಂರಕ್ಷಣೆಗೆ ತಾನು ಸಂಪೂರ್ಣ ಬದ್ಧ ಎಂದು ಉತ್ತರಪ್ರದೇಶ ಸರ್ಕಾರ ಇಂದು ಸುಪ್ರೀಂಕೋರ್ಟ್‍ಗೆ ಭರವಸೆ ನೀಡಿದೆ. ಟಿಟಿಝಡ್ 10,400 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದು, ಉತ್ತರಪ್ರದೇಶದ ಆಗ್ರಾ, ಫಿರೋಜಾಬಾದ್, ಮಥುರಾ, ಹತ್ರಾಸ್ ಮತ್ತು ಈಥ್ ಜಿಲ್ಲೆಗಳು ಹಾಗೂ ರಾಜಸ್ತಾನದ ಭರತ್‍ಪುರ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ತಾಜ್ ಮಹಲ್ ಮತ್ತು ಟಟಿಝಡ್ ಸುತ್ತಮುತ್ತಲ ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ದಿಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

Facebook Comments

Sri Raghav

Admin