ತಿರುಪತಿ ತಿಮ್ಮಪ್ಪನ ದರ್ಶನ ತಾರತಮ್ಯಕ್ಕೆ ಬೀಳುತ್ತಾ ಬ್ರೇಕ್..?

ಈ ಸುದ್ದಿಯನ್ನು ಶೇರ್ ಮಾಡಿ

Tirupati--02

ಚೆನ್ನೈ, ನ.14- ಭಗವಂತನ ಎದುರು ಎಲ್ಲರೂ ಸಮಾನರು. ಹೀಗಾಗಿ ದೇವಸ್ಥಾನಗಳಲ್ಲಿ ಸರ್ವ ಭಕ್ತಾದಿಗಳಿಗೂ ಸಮಾನ ಅವಕಾಶ ನೀಡಬೇಕು. ಉಚಿತ ಮತ್ತು ಹಣ ಪಾವತಿಸಿ ದರ್ಶನ ಮಾಡುವ ಆಸ್ತಿಕರ ನಡುವೆ ವ್ಯತ್ಯಾಸ ಇರಬಾರದು ಎಂಬ ಮದ್ರಾಸ್ ಹೈಕೋರ್ಟ್ ತೀರ್ಪು ಈಗ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಗೊಂದಲ ಮೂಡಿಸಿದೆ.

ತಿರುಪತಿ ತಿರುಮಲ ದೇವಸ್ಥಾನಂ ಪಾವತಿ ದರ್ಶನವನ್ನು ಜನಪ್ರಿಯಗೊಳಿಸಿದೆ. ಪಾವತಿ ದರ್ಶನ ವಿಧಾನದಲ್ಲಿ ಹಣ ಪಾವತಿ ಮಾಡಿದ ಭಕ್ತರು ಮತ್ತು ಉಚಿತ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ಭಕ್ತಾದಿಗಳನ್ನು ಭಿನ್ನವಾಗಿ ಪರಿಗಣಿಸುವ ಪದ್ದತಿ ಇರುವಾಗ, ಮದ್ರಾಸ್ ಹೈಕೋರ್ಟ್ ಆದೇಶದಿಂದ ತಿರುಪತಿಯಲ್ಲಿಯೂ ತಾರತಮ್ಯ ನೀತಿ ಬದಲಾವಣೆ ಆಗುತ್ತದೆಯೇ ಎಂಬ ಕುತೂಹಲ ತಿಮ್ಮಪ್ಪನ ಭಕ್ತರಲ್ಲಿದೆ.

Facebook Comments

Sri Raghav

Admin