ಬ್ಯಾಂಕಿನಿಂದ ಹಣ ಪಡೆದು ಹೋಗುತಿದ್ದವನ ಅಡ್ಡಗಟ್ಟಿ, 2.40 ಲಕ್ಷ ರೂ. ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

bob

ಚಿಕ್ಕಬಳ್ಳಾಪುರ, ನ. 14- ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ವಾಪಸ್ಸಾಗುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿ ಹಣ ಲಪಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಗುಂತಪ್ಪನಹಳ್ಳಿ ವಾಸಿ ಪ್ರವೀಣ್ ಎಂಬುವರೇ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದವರು. ನಗರದ ಎಸ್‍ಬಿಐ ಬ್ಯಾಂಕಿನಲ್ಲಿ 2.40 ಲಕ್ಷ ರೂಗಳನ್ನು ಡ್ರಾ ಮಾಡಿಕೊಂಡು ಡ್ರಾ ಮಾಡಿ ಹಣವನ್ನೇ ಬೈಕನಲ್ಲಿಟ್ಟುಕೊಂಡು ಹಿಂತಿರುಗಿದ್ದಾನೆ. ಬೈಕನ್ನೇ 2 ಬೈಕುಗಳಲ್ಲಿ ಪ್ರವೀಣ್‍ಗೆ ಅರಿವಿಲ್ಲದಂತೆ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಪ್ರವೀಣ್ ತನ್ನ ಗುಂತಪ್ಪನಹಳ್ಳಿಗೆ ನೇರವಾಗಿ ತೆರಳದೆ ತನ್ನ ಕೆಲಸದ ನಿಮಿತ್ತವಾಗಿ ಗ್ರಾಮದ ಸನಿಹದಲ್ಲಿಯೇ ಇರುವ ಹಾರೋಬಂಡೆ ಗ್ರಾ.ಪಂ.ಗೆ ಗ್ರಾ.ಪಂ. ಮುಂದೆ ಬೈಕ್ ನಿಲ್ಲಿಸಿ ತೆರಳಿದ್ದಾನೆ.

ಗ್ರಾಪಂ ಒಳಗೆ ಕೂತು ಪ್ರವೀಣ ಸಿಸಿ ಕ್ಯಾಮರಾ ಕಡೆ ಕಣ್ಣಾಡಿಸಿದ್ದಾನೆ. ಕ್ಯಾಮೆರಾದಲ್ಲಿ ತನ್ನ ಬೈಕ್ ಬಳಿ ನಿಂತವರ ದೃಶ್ಯ ಕಂಡು ಬಂದಿದೆ ತಕ್ಷಣ ಹೊರಗಡೆ ಹೋಗುತ್ತಿದ್ದಂತೆ ಬೈಕ್‍ನಲ್ಲಿ ಇಟ್ಟಿದ್ದ 2.40 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ. ಸಹಾಯಕ್ಕಾಗಿ ಕೂಗಿ ಕೊಂಡಾಗ ಈರ್ವರು ಸಿಕ್ಕಿದ್ದಾರೆ ಇನ್ನೀರ್ವರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಸಿಕ್ಕ ಇಬ್ಬರಿಗೆ ಗ್ರಾಮಸ್ಥರು ಗೂಸ ನೀಡಿದ್ದಾರೆ. ಬೈಕ್ ಕಸಿದುಕೊಂಡು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದು, ಇವರು ಆಂದ್ರ ಪ್ರದೇಶದ ಅನಂತಪುರ ಸಮೀಪದ ಚಿತ್ತೂರು ತಾಲ್ಲೂಕಿನ ರಮಣ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಇಬ್ಬರನ್ನು ಪತ್ತೆಗೆ ಬಲೆ ಬೀಸಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin