ಮೈಸೂರು-ಹುಣಸೂರು ರಸ್ತೆಯಲ್ಲಿ ಭೀಕರ ಅಪಘಾತ ಒಂದೇ ಕುಟುಂಬದ ಮೂವರ ಸಾವು

hunsur-1-n
ಮೈಸೂರು, ನ.14-ಇಂದು ಮುಂಜಾನೆ ಮೈಸೂರು-ಹುಣಸೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಟೆಂಪೋ ಟ್ರಾವೆಲ್ಸ್‍ನಲ್ಲಿ ಒಂದೇ ಕುಟುಂಬದ 17 ಮಂದಿ ಮಂಗಳೂರಿನಿಂದ ಊಟಿಗೆ ತೆರಳುತ್ತಿದ್ದರು. ಹುಣಸೂರು ಬಳಿಯಿರುವ ಬಸರಿಕಟ್ಟೆ ಬಳಿ ಲಾರಿಯನ್ನು ಓವರ್ ಟೇಕ್ ಮಾಡಲು ಟೆಂಪೋ ಚಾಲಕ ಮುಂದಾದ ವೇಳೆ ನಿಯಂತ್ರಣ ತಪ್ಪಿ ಲಾರಿಗೆ ಅಪ್ಪಳಿಸಿದ್ದರಿಂದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಅಬ್ದುಲ್ ಹನಿ (47), ಮಹಮ್ಮದ್ ಇಕ್ಬಾಲ್ (37) ಮತ್ತು ಶೇಖ್ ಅರೇಬ್ (11) ಮೃತ ದುರ್ದೈವಿಗಳು.

ಘಟನೆಯಲ್ಲಿ ಗಾಯಗೊಂಡಿರುವ 14 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಹುಣಸೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೂವರ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments