ವಿಜ್ಞಾನಿಗಳನ್ನೇ ದಂಗಾಗುವಂತೆ ಮಾಡಿದೆ ಪಕ್ಷಿಗಳನ್ನು ತಿನ್ನುವ ಈ ದೊಡ್ಡ ಏಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Crab--02
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ-ಇದು ಸಂತ ಶಿಶುನಾಳ ಷರೀಫರು ರಚಿಸಿದ ಜನಪ್ರಿಯ ಗೀತೆ. ಈಗ ಈ ಗೀತೆಯನ್ನೇ ಹಕ್ಕಿನ ಏಡಿ ನುಂಗಿತ್ತ ನೋಡಪ್ಪ ತಮ್ಮ ಎಂದು ಬದಲಿಸಿಕೊಂಡು ಹಾಡುವಂಥ ಅಪರೂಪದ ವಿದ್ಯಮಾನವೊಂದು ನಡೆದಿದೆ. ಸಾಮಾನ್ಯವಾಗಿ ಪಕ್ಷಿಗಳು ಏಡಿಗಳನ್ನು ತಿನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಹಕ್ಕಿಗಳನ್ನೇ ಕಬಳಿಸುವ ದೊಡ್ಡ ಗಾತ್ರದ ಏಡಿಗಳೂ ಇವೆ ಎಂಬುದನ್ನು ನೀವು ಬಲ್ಲಿರಾ..?

ಇಂಥ ಪರಭಕ್ಷಕ ಏಡಿಯ ಹೆಸರು ಕೋಕೊನಟ್ ಕ್ರಾಬ್. ಇದನ್ನು ತೆಂಗಿನಕಾಯಿ ಏಡಿ ಎನ್ನಬಹುದು. ಏಕೆಂದರೆ ಗಟ್ಟಿಯಾದ ತೆಂಗಿನಕಾಯಿಯನ್ನೇ ಒಂದೇ ಏಟಿಗೆ ತೆರೆಯುವಷ್ಟು ಇದು ಶಕ್ತಿಯುತವಾಗಿದೆ.  ಶ್ವಾನದಷ್ಟು ದೊಡ್ಡದಾಗಿ ಅಂದರೆ 3 ಅಡಿಗಳಷ್ಟು ಅಡ್ಡಗಲವಾಗಿ ಬೆಳೆಯುವ ಇವು ಮರಗಳನ್ನು ಲೀಲಾಜಾಲವಾಗಿ ಹತ್ತಬಲ್ಲವು. ಇಕ್ಕಳದಂತಿರುವ ತನ್ನ ಸದೃಢ ಕಾಲುಗಳಿಂದ ಗಟ್ಟಿಯಾದ ವಸ್ತುಗಳನ್ನು ಹರಿದು ಚಿಂದಿ ಮಾಡಬಲ್ಲದು. ಇವುಗಳ ಕಾಲುಗಳು ಮತ್ತು ಸಿಂಹದ ದವಡೆಗಳಷ್ಟೇ ಬಲವಾಗಿವೆ.

ಪಕ್ಷಿಗಳ ಮೇಲೆ ಆಕ್ರಮಣ ಮಾಡಿ ಕೊಂದು ಕಬಳಿಸುವ ದೊಡ್ಡ ಗ್ರಾತದ ಏಡಿಗಳಿವೆ ಎಂಬ ಬಗ್ಗೆ ಸಂಗತಿ ಬಗ್ಗೆ ಮೊದಲಿನಿಂದಲೂ ಪರ-ವಿರೋಧ ಅಭಿಪ್ರಾಯಗಳಿದ್ದವು. ಆದರೆ ಮೊನ್ನೆ ಇದು ಪಾರಿವಾಳವೊಂದರ ಮೇಲೆ ಹಠಾತ್ ಆಕ್ರಮಣ ನಡೆಸಿ ಭಕ್ಷಿಸಿದ ರೀತಿಯನ್ನು ನೋಡಿ ಜೀವ ವಿಜ್ಞಾನಿಗಳೇ ದಂಗಾದರು. ಬಯೋಲಾಜಿಸ್ಟ್ ಅಮೆಲಿಯಾ ಇಯರ್‍ಹಾರ್ಟ್ ತಮ್ಮ ಕಣ್ಣಿಗೆ ಬಿದ್ದ ಅಪರೂಪದ ದೃಶ್ಯದ ವೀಡಿಯೋವನ್ನು ಬಿಡುಗಡೆ ಮಾಡಿರುವುದು ಪಕ್ಷಿಭಕ್ಷಕ ಏಡಿ ಸಂತತಿ ಬಗ್ಗೆ ಬೆಳಕು ಚೆಲ್ಲಿದೆ.

ಇವು ಮರವನ್ನು ಸರಸರನೇ ಏರಿ ಗೂಡಿನಲ್ಲಿರುವ ದೊಡ್ಡ ದಾದ ಹಕ್ಕಿಗಳನ್ನು ಬೇಟೆಯಾಡಿ ಕೊಲ್ಲುತ್ತವೆ ಎಂಬುದು ದೃಢ ಪಟ್ಟಿದೆ. ಹಿಂದು ಮಹಾಸಾಗರದ ದ್ವೀಪಗಳಲ್ಲಿ ಕಂಡುಬರುವ ಕೋಕೊನಟ್ ಕ್ರಾಬ್ ಜೀವ ಲೋಕದ ವಿಸ್ಮಯ ಜೀವಿ ಎನಿಸಿವೆ.

Facebook Comments

Sri Raghav

Admin