ವಿಮಾನ ಟೆಕ್ ಆಫ್ ವೇಳೆ ಅಡ್ಡ ಬಂದ ಕಾಡು ಹಂದಿ, 160 ಜನರ ಪ್ರಾಣ ಬಚಾವ್…!

ಈ ಸುದ್ದಿಯನ್ನು ಶೇರ್ ಮಾಡಿ

Plane--02

ಮುಂಬೈ, ನ.14-ರನ್‍ವೇನಲ್ಲಿ ಕಾಣಿಸಿಕೊಂಡ ಕಾಡುಹಂದಿಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು, 160ಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿ ಕೂದಳೆಲೆ ಅಂತರದಲ್ಲಿ ಸಾವಿನಿಂದ ಪಾರಾದ ಘಟನೆ ಆಂಧ್ರಪ್ರದೇಶದ ವೈಜಾಗ್‍ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿಶಾಖಪಟ್ಟಣಂದಿಂದ ಹೈದರಾಬಾದ್‍ಗೆ ತೆರಳಲು ಭಾನುವಾರ ಇಂಡಿಗೋ 6ಇ-742 ವಿಮಾನ ಮೇಲೆರುತ್ತಿದ್ದ ಹಂತದಲ್ಲಿ ಕಾಡು ಹಂದಿಯೊಂದು ರನ್‍ವೇನಲ್ಲಿ ಓಡಾಡುತ್ತಿತ್ತು. ಕೂಡಲೇ ಜಾಗೃತರಾದ ಪೈಲೆಟ್ ವಿಮಾನ ಕಾಡುಹಂದಿಗೆ ಅಪ್ಪಳಿಸಿ, ಅನಾಹುತ ಸಂಭವಿಸುವುದನ್ನು ತಪ್ಪಿಸಲು ಸಮಯಪ್ರಜ್ಞೆಯ ಚಾಲನೆ ವಿಧಾನ ಅನುಸರಿಸಿದರು. ಇದರಿಂದ ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದಂತಾಗಿದೆ.

ಈ ವಿಮಾನದಲ್ಲಿ 159 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂದು ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಾನದ ಕ್ಯಾಪ್ಟನ್ ತಕ್ಷಣ ವಾಯು ಸಂಚಾರ ನಿಯಂತ್ರಣ ವಿಭಾಗಕ್ಕೆ ವಿಷಯ ತಿಳಿಸಿ ವೈಜಾಗ್ ವಿಮಾನ ನಿಲ್ದಾಣದಲ್ಲಿ ಮತ್ತೆ ವಿಮಾನ ಇಳಿಯುತೆ ಮಾಡಿ ಪರಿಶೀಲನೆ ನಡೆಸಿದರು. ಇದರಿಂದ ಒಂದೂವರೆ ಗಂಟೆ ಕಾಲ ವಿಮಾನಯಾನ ತಡವಾಯಿತು. ರನ್‍ವೇಗಳಲ್ಲಿ ಪಕ್ಷಿಗಳು ಮತ್ತು ವನ್ಯಜೀವಿಗಳಿಂದ ಅಗಾಗ ವಿಮಾನ ಮೇಲೆರಲು ಮತ್ತು ಭೂಸ್ಪರ್ಶ ಮಾಡಲು ಅಡ್ಡಿಯಾಗುತ್ತಿವೆ.

Facebook Comments

Sri Raghav

Admin