ಸೆಲ್ಫೀ ಹುಚ್ಚಾಟಕ್ಕೆ ಹಾರಿ ಹೋಯ್ತು ಮತ್ತೊಂದು ಪ್ರಾಣ..!

ಈ ಸುದ್ದಿಯನ್ನು ಶೇರ್ ಮಾಡಿ

Selfie--04

ಬೊಕಾರೊ, (ಜಾರ್ಖಂಡ್), ನ.14-ಸೆಲ್ಫೀ ಕ್ರೇಜ್ ಸಾವಿನ ಸರಣಿ ಮುಂದುವರಿದಿದ್ದು, ಬಾಲಕಿಯೊಬ್ಬಳು ನೀರು ಪಾಲಾಗಿರುವ ಘಟನೆ ಜಾರ್ಖಂಡ್‍ನ ಬೊಕಾರೊ ಉಕ್ಕು ಘಟಕದ ಶೈತ್ಯ ಕೊಳದಲ್ಲಿ(ಕೂಲಿಂಗ್ ಪಾಂಡ್) ನಿನ್ನೆ ಸಂಭವಿಸಿದೆ. ಸುಲೇಖ ಕುಮಾರಿ (16) ಸೆಲ್ಫೀ ತೆಗೆಯುತ್ತಿದ್ದಾಗ ಕೊಳಕ್ಕೆ ಬಿದ್ದು, ಆಳವಾದ ನೀರಿನಲ್ಲಿ ಮುಳುಗಿದಳು ಎಂದು ಪೊಲೀಸರು ತಿಳಿಸಿದ್ದಾರೆ. ನುರಿತ ಈಜುಗಾರರು ಆಕೆಯ ಶವವನ್ನು ಹೊರಕ್ಕೆ ತೆಗೆದಿದ್ದಾರೆ.

ಕಳೆದ ತಿಂಗಳು 27ರಂದು ಇಬ್ಬರು ಮಹಿಳಾ ಪ್ರವಾಸಿಗಳು ನೀರುಪಾಲಾಗಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿತ್ತು. ನಾಗಬಲಿ ನದಿಯಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಜ್ಯೋತಿ (27) ಮತ್ತು ವಿಜಯನಗರಂನ ಶ್ರೀದೇವಿ (23) ಜಲಸಮಾಧಿಯಾದರು ವಿಶಾಖಪಟ್ಟಣಂನಿಂದ ಪ್ರವಾಸಕ್ಕೆ ತೆರಳಿದ್ದ ಒಂಭತ್ತು ಮಹಿಳೆಯರ ತಂಡವು ರಾಯಗಡ ಪಟ್ಟಣದ ಹೊರವಲಯದ ನಾಗಬಲಿ ನದಿಯ ತೂಗು ಸೇತುವೆ ದಾಟಿ ನೀರಿಗೆ ಇಳಿದು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಈ ಘಟನೆ ನಡೆದಿತ್ತು. ಬಂಡೆ ಮೇಲೆ ಹತ್ತಿ ಸ್ವಯಂ ಫೋಟೊದಲ್ಲಿ ನಿರತವಾಗಿದ್ದಾಗ ಕಾಲು ಜಾರಿ ನೀರಿನ ಭೋರ್ಗರೆತದಲ್ಲಿ ಇವರಿಬ್ಬರು ಕೊಚ್ಚಿಕೊಂಡು ಹೋದರು. ಅವರ ಶವಗಳು ನಂತರ ಪತ್ತೆಯಾಗಿತ್ತು.

Facebook Comments

Sri Raghav

Admin