ಹೊಸ ಪಕ್ಷ ಕಟ್ಟಲು ಮುಂದಾಗಿರುವ ವರ್ತೂರು ಪ್ರಕಾಶ್’ರಿಂದ ಭರ್ಜರಿ ಬಾಡೂಟ

ಈ ಸುದ್ದಿಯನ್ನು ಶೇರ್ ಮಾಡಿ

Baduta--02

ಕೋಲಾರ, ನ.14- ನಮ್ಮ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಶಾಸಕ ವರ್ತೂರು ಪ್ರಕಾಶ್ ಇಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಮೆಚ್ಚಿಸಲು ಭರ್ಜರಿ ಬಾಡೂಟ ಏರ್ಪಡಿಸಿದ್ದರು. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕ ಪ್ಲೈ ಓವರ್ ಸಮೀಪದ ಸರ್ವಿಸ್ ರಸ್ತೆ ಉದ್ದಕ್ಕೂ ಪೆಂಡಾಲ್ ಹಾಕಿ ಅಲ್ಲೇ ಬಾಡೂಟ ಸಿದ್ದಪಡಿಸಲಾಯಿತು.

ಇದರಿಂದಾಗಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವವರಿಗೆ ಬಹಳ ಅಡಚಣೆ ಉಂಟಾಯಿತು. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹಾಗಾಗಿ ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಿದೆ. ಉತ್ತಮ ಆಡಳಿತ ನೀಡುತ್ತಿಲ್ಲ . ಇದು ಬೇಸರ ತಂದಿದ್ದು , ನಮ್ಮ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಲು ವರ್ತೂರು ಪ್ರಕಾಶ್ ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡ ಸಭೆಯನ್ನು ಹಮ್ಮಿಕೊಂಡಿದ್ದು , ಹೊಸ ಪಕ್ಷ ಕಟ್ಟುವ ಕುರಿತು ವರ್ತೂರು ಪ್ರಕಾಶ್ ಚರ್ಚಿಸಲಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಮುಂದಿನ ನಡೆ ತೀರ್ಮಾನಿಸಲಿದ್ದಾರೆ.

Facebook Comments

Sri Raghav

Admin