ಎಸಿಬಿ ಬಲೆಗೆ ಬಿದ್ದ ಎಫ್‍ಡಿಸಿ ನೌಕರ

ಈ ಸುದ್ದಿಯನ್ನು ಶೇರ್ ಮಾಡಿ

ACB--01
ಬಾಗಲಕೋಟೆ, ನ.15- ಆರೋಪದಿಂದ ಖುಲಾಸೆಗೊಳಿಸಲು ತಹಸೀಲ್ದಾರ್ ಅವರಿಗೆ ಶಿಫಾರಸು ಮಾಡಲು ಅರ್ಜಿದಾರನಿಂದ ಲಂಚ ಪಡೆಯುತ್ತಿದ್ದ ಎಫ್‍ಡಿಸಿ ನೌಕರನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದಾನೆ. ತಹಸೀಲ್ದಾರ್ ಕಚೇರಿ ಎಫ್‍ಡಿಸಿ ನೌಕರ ವಿನೋದ್ ಕೃಷ್ಣಪ್ಪ ಪತ್ತಾರ ಸಿಕ್ಕಿಬಿದ್ದಿದ್ದಾನೆ. ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರ ಆರೋಪಿಗೆ ಆರೋಪದಿಂದ ಖುಲಾಸೆಗೊಳಿಸಲು ತಹಸೀಲ್ದಾರ್‍ಗೆ ಶಿಫಾರಸು ಮಾಡುತ್ತೇನೆ ಎಂದು ಕೃಷ್ಣಪ್ಪ ಪತ್ತಾರ 50 ಸಾವಿರ ಲಂಚ ಕೇಳಿದ್ದ. ನಿನ್ನೆ 25 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಕೃಷ್ಣಪ್ಪಪತ್ತಾರನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

Facebook Comments

Sri Raghav

Admin