ಕಿಡಿಗೇಡಿಗಳಿಂದ ನಾಗಮಂಗಲ ತಾಪಂ ಅಧ್ಯಕ್ಷನ ಕಾರು ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

maddur
ಮದ್ದೂರು, ನ.15- ನಾಗಮಂಗಲ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನವೀನ್‍ಕುಮಾರ್ ಅವರ ಕಾರಿಗೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ್ದಾರೆ. ಶಾಸಕ ಚೆಲುವರಾಯಸ್ವಾಮಿ ಬೆಂಬಲಿಗರು ಎನ್ನಲಾದ ನವೀನ್‍ಕುಮಾರ್ ಅವರು ರಾತ್ರಿ ನಾಗಮಂಗಲದ ಬಿಜಿನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಕಿಡಿಗೇಡಿಗಳು ಇವರ ಕಾರಿಗೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ. ಮಾಜಿ ಶಾಸಕ ಸುರೇಶ್‍ಗೌಡ ಅವರ ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿ ನವೀನ್‍ಕುಮಾರ್ ಬೆಳ್ಳೂರು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Facebook Comments

Sri Raghav

Admin