ಚುಚ್ಚು ಮದ್ದಿನಿಂದ ಯುವತಿ ಸಾವು ಪ್ರಕರಣ, ವೈದ್ಯನ ವಿರುದ್ಧ ಕ್ರಿಮಿನಲ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

 

ಮೈಸೂರು, ನ.15-ಚುಚ್ಚು ಮದ್ದು ಸೋಂಕಿನಿಂದ ಪದವೀಧರ ಯುವತಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಕಾಳಗುಂಡಿ ಗ್ರಾಮದ ನಿವಾಸಿ ಅಂಕುಶ(21) ಎಂಬ ಯುವತಿ ಜ್ವರದಿಂದ ಬಳಲಿ ಚಿಕಿತ್ಸೆಗಾಗಿ ವೈದ್ಯ ರಾಜು ಬಳಿ ಹೋದಾಗ ಚುಚ್ಚುಮದ್ದು ನೀಡಿದ್ದು, ಇದರಿಂದ ಸೋಂಕು ತಗುಲಿ ನಿನ್ನೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂಕುಶಳ ತಂದೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ವೈದ್ಯ ರಾಜು ವಿರುದ್ಧ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಕಲಿ ವೈದ್ಯರ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಿನ್ನೆ ಸಂಜೆ ಆರೋಗ್ಯಾಧಿಕಾರಿಗಳು ತಾಲೂಕಿನಾದ್ಯಂತ ದಾಳಿ ನಡೆಸಿ ಐದು ಕ್ಲಿನಿಕ್‍ಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಗೂರಿನಲ್ಲಿ ದುರ್ಗಾ ಕ್ಲಿನಿಕ್ ಹೆಸರಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ.ಚೈತ್ರ ಅವರು ಆಯುಶ್ ಪರವಾನಗಿ ಮಾತ್ರ ಹೊಂದಿದ್ದು, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ಲಿನಿಕ್‍ನ್ನು ಮುಚ್ಚಿಸಲಾಯಿತು. ಹಂಪಾಪುರದಲ್ಲಿರುವ ಡಾ.ವಿಕಾಸ್ ಎಂಬುವರು ನಡೆಸುತ್ತಿದ್ದ ಸಂಚಿತಾ ಕ್ಲಿನಿಕ್, ಡಾ.ಎಚ್.ಬಿ.ರಾಮಚಂದ್ರ ಮತ್ತು ಮಧುಸೂದನ್‍ಗೆ ಸೇರಿದ ಹೆಲ್ತ್ ಡೇ ಕೇರ್ ಕ್ಲಿನಿಕ್ ಹಾಗೂ ಡಾ.ರಾಮಚಂದ್ರ ಎಂಬುವರು ನಡೆಸುತ್ತಿದ್ದ ಮಾತೃಶ್ರೀ ಕ್ಲಿನಿಕ್‍ಗಳನ್ನು ಮುಚ್ಚಿಸಲಾಗಿದೆ.

Facebook Comments

Sri Raghav

Admin