ಜಾರ್ಜ್ ಜೈಲಿಗೆ ಹೋಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ಬೆಳಗಾವಿ(ಸುವರ್ಣಸೌಧ), ನ.15- ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಜೈಲಿಗೆ ಹೋಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದಿಯಾಗಿ ಯಾರೇ ಪ್ರಯತ್ನಪಟ್ಟರೂ ಜಾರ್ಜ್ ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಕಾರಣ ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಜಾರ್ಜ್ ಅವರನ್ನು ಆರೋಪಿಸಿದ್ದಾರೆ ಎಂದರು.

ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನಾಶಪಡುವ ಪ್ರಯತ್ನ ನಡೆದಿದೆ. ಅವರು ಆತ್ಮಹತ್ಯೆ ಮಾಡಿಕೊಂಡ ವಸತಿ ಗೃಹದಲ್ಲಿ ಇದೀಗ ಗುಂಡು ಪತ್ತೆಯಾಗಿದೆ. ಸಿಬಿಐ ತನಿಖೆ ಆರಂಭವಾಗಿದೆ. ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಅವರೇ ಮೊದಲ ಆರೋಪಿಯಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.ತರಾತುರಿಯಲ್ಲಿ ಸಿಐಡಿ ಜಾರ್ಜ್ ಅವರಿಗೆ ಕ್ಲೀನ್‍ಚಿಟ್ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ವೈಯಕ್ತಿಕ ಟೀಕೆ ಮಾಡಿಲ್ಲ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ಅವರ ಬಗ್ಗೆ ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಮಕ್ಕಳಿಲ್ಲ ಎಂದು ಜರಿದಿಲ್ಲ, ಅವರು ಸಚಿವರಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಆಗಿರು ಸಾವುಗಳು ಸ್ವಾಭಾವಿಕವಲ್ಲ. ಪರೋಕ್ಷವಾಗಿ ಕೊಲೆಯಾಗಿದ್ದು, ಆ ಅರ್ಥದಲ್ಲಿ ಕೊಲೆಗಡುಕ ಎಂದು ಹೇಳಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡಿವಾಣ ಹಾಕಲು ವಿಧೇಯಕದ ಬಗ್ಗೆ ಮೊದಲು ಕಾಂಗ್ರೆಸ್ ಶಾಸಕರು ಒಪ್ಪಿಕೊಳ್ಳಲಿ. ನಂತರ ಆರ್‍ಎಸ್‍ಎಸ್ ಕಚೇರಿಗೆ ಬರಲಿ ಎಂದು ಕುಹುಕವಾಡಿದರು.

Facebook Comments

Sri Raghav

Admin