ಪೂಂಛ್ ಜಿಲ್ಲೆಯ ಗಡಿಯಲ್ಲಿ ಪಾಕ್ ಸೈನಿಕರಿಂದ ಮತ್ತೆ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Firing--0141

ಜಮ್ಮು, ನ. 15- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಇಂದು ಮುಂಜಾನೆ ಪಾಕಿಸ್ಥಾನದ ಪಡೆಗಳು ಭಾರತೀಯ ನೆಲೆಗಳ ಮೇಲೆ ಷೆಲ್ ಮತ್ತು ಗುಂಡಿನ ದಾಳಿ ನಡೆಸಿದ್ದು ದಕ್ಕೆ ಪ್ರತಿಯಾಗಿ ಭಾರತೀಯ ಗಡಿ ಭದ್ರತಾ ಪಡೆಯ(ಬಿಎಸ್‍ಎಫ್) ಯೋಧರೂ ಕೂಡ ದಿಟ್ಟ ಉತ್ತರ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನದ ಪಡೆಗಳು ಬೆಳಗ್ಗೆ 8-00 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಭಾರತೀಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತವಾಗಿ ಗುಂಡಿನ ದಾಳಿ ಮತ್ತು ಷೆಲ್ ದಾಳಿ ನಡೆಸಿದರು ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇಂಪಾಲ ವರದಿ:  ಮ್ಯಾನ್ಮಾರ್ ಗಡಿ ಭಾಗದ ಚಂದೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‍ನ ಯೋಧರು ಉಗ್ರರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin