ಪ್ರಥಮ ಅಧಿವೇಶನದಲ್ಲಿ ವಿಚಲಿತರಾದ ಸಚಿವೆ ಗೀತಾ ಮಹದೇವ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

geeth

ಬೆಳಗಾವಿ (ಸುವರ್ಣಸೌಧ), ನ.15-ವಿಧಾನಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಬೆನ್ನಲ್ಲೇ ಸಣ್ಣಕೈಗಾರಿಕೆ ಹಾಗೂ ಸಕ್ಕರೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ಪತ್ನಿ ಸಚಿವೆ ಎಂ.ಸಿ.ಮೋಹನ್‍ಕುಮಾರಿ (ಗೀತಾ ಮಹದೇವಪ್ರಸಾದ್) ಅವರು ತಡಬಡಾಯಿಸಿದ ಪ್ರಸಂಗ ನಡೆಯಿತು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ನಾರಾಯಣಸ್ವಾಮಿ ಅವರು ಕೋಲಾರ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ವಶಪಡಿಸಿಕೊಂಡ ಭೂಮಿಯ ಬಗ್ಗೆ ಮಾಹಿತಿ ಕೇಳಿದರು. ಸಚಿವರು ಲಿಖಿತವಾಗಿ ನೀಡಿದ ಉತ್ತರದಲ್ಲಿ ತಪ್ಪು ಮಾಹಿತಿ ಇದೆ. ನನ್ನ ತಾಲ್ಲೂಕಿನಲ್ಲೇ 180 ಎಕರೆಗಿಂತ ಹೆಚ್ಚು ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. ಆದರೆ, ಸಚಿವರು ಕೇವಲ 80 ಎಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಲು ನಿಂತ ಮೋಹನ್‍ಕುಮಾರಿ ಅವರು, ಕೋಲಾರ ಜಿಲ್ಲೆಯಾದ್ಯಂತ 3109 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಾವು ನೀಡಿರುವ ಮಾಹಿತಿ ಸರಿ ಇದೆ ಎಂದು ಸಮರ್ಥಸಿಕೊಳ್ಳಲು ಯತ್ನಿಸಿದರು. ಆದರೆ, ಪ್ರಥಮ ಬಾರಿಗೆ ಸಚಿವರಾಗಿ ಮಾತನಾಡುತ್ತಿರುವ ಮೋಹನ್‍ಕುಮಾರಿ ಅವರು ಸ್ವಲ್ಪಗಲಿಬಿಲಿಗೆ ಒಳಗಾದರು. ಇದನ್ನು ಅರ್ಥ ಮಾಡಿಕೊಂಡ ಸಭಾಧ್ಯಕ್ಷ ಕೋಳಿವಾಡ ಈ ಪ್ರಶ್ನೆಯನ್ನು ನಾಳೆಗೆ ಮುಂದೂಡುತ್ತೇನೆ. ಸ್ಪಷ್ಟವಾದ ಮಾಹಿತಿ ಪಡೆದು ಉತ್ತರ ಹೇಳಿ ಎಂದು ಸೂಚಿಸಿದರು. ಅದಕ್ಕೆ ಶಾಸಕರು ಮತ್ತು ಸಚಿವರಿಬ್ಬರು ಒಪ್ಪಿಕೊಂಡರು.

Facebook Comments

Sri Raghav

Admin