ಬಾಲಕಿ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jailed-01
ಚಿಕ್ಕಮಗಳೂರು, ನ.15-ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಧರ್ ಎಂಬ ಆರೋಪಿಗೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.20 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಡಿ.ಕಂಟೀಗೌಡ ಅವರು ಈ ಆದೇಶ ನೀಡಿದ್ದಾರೆ. ಪೋಕ್ಸೋ ಕಾಯ್ದೆ, ಪರಿಶಿಷ್ಟಜಾತಿ ದೌರ್ಜನ್ಯ ತಡೆಕಾಯ್ದೆ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 70 ಸಾವಿರ ಸಂತ್ರಸ್ಥೆಗೆ ನೀಡುವಂತೆ ಆದೇಶ ನೀಡಿದೆ.

ಘಟನೆ ಹಿನ್ನೆಲೆ: ಮಲ್ಲಂದೂರನ ಜೇನುಸಿರಿ ಆಸಿಕೊಪ್ಪಲು ಗ್ರಾಮದ 17 ವರ್ಷದ ಬಾಲಕಿಯನ್ನು ಅಪಹರಿಸಿ ಶ್ರೀಧರ್ ಎಂಬಾತ ಜೇನುಕೊಪ್ಪಲು ಎಸ್ಟೇಟ್ ಲೈನ್‍ಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಮಲ್ಲಿಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಕಳುಹಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್‍ಪ್ರಾಸಿಕ್ಯೂಟರ್ ಆರ್.ನಾಗರಾಜ್ ವಾದ ಮಂಡಿಸಿದ್ದರು.

Facebook Comments

Sri Raghav

Admin