ಬೆಂಗಳೂರು : ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿದ ನಾಲ್ವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Crime-Bangalore-Rape--01

ಬೆಂಗಳೂರು, ನ.15-ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿಯ ರಾಘವೇಂದ್ರ (26), ದಾವಣಗೆರೆಯ ಸಾಗರ್ (22), ಮೈಸೂರಿನ ಮಂಜು (32) ಮತ್ತು ಪಶ್ಚಿಮ ಬಂಗಾಳದ ಮನೋರಂಜನ್ ದಾಸ್ (52) ಬಂಧಿತರು. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿಯನ್ನು ಆಕೆಯ ಸ್ನೇಹಿತ ರಾಘವೇಂದ್ರ ಪುಸಲಾಯಿಸಿ ಅ.26ರಂದು ಕರೆದೊಯ್ದು ಕಾಡುಗೋಡಿ ರೈಲ್ವೆ ನಿಲ್ದಾಣದ ಬಳಿ ಇರುವ ಲಾಡ್ಜ್‍ವೊಂದರಲ್ಲಿ ಇರಿಸಿದ್ದಾನೆ.

ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಬಾಲಕಿ ಲಾಡ್ಜ್‍ನಲ್ಲಿರುವ ಬಗ್ಗೆ ಮಾಹಿತಿ ಪಡೆದು ಆ ಲಾಡ್ಜ್ ಮೇಲೆ ದಾಳಿ ಮಾಡಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸ್ನೇಹಿತ ರಾಘವೇಂದ್ರ ಎಂಬಾತ ನನ್ನನ್ನು ಕರೆದೊಯ್ದು ಲಾಡ್ಜ್‍ನಲ್ಲಿರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದನು. ನಂತರ ಆತನ ಸ್ನೇಹಿತರಾದ ಸಾಗರ್ ಮತ್ತು ಮಂಜು ಹಾಗೂ ಲಾಡ್ಜ್ ನಡೆಸುತ್ತಿರುವ ಮನೋರಂಜನ್ ದಾಸ್ ಸಹ ಅತ್ಯಾಚಾರ ಎಸಗಿದ್ದಾರೆಂದು ಪೊಲೀಸರ ವಿಚಾರಣೆ ವೇಳೆ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಾಲಕಿಯ ಹೇಳಿಕೆ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೆ.ಆರ್.ಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin