ಭಾರತದ ಕಂಪನಿಗಳಿಂದ ಅಮೆರಿಕದಲ್ಲಿ 1,13,000 ಉದ್ಯೋಗ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Jobss--01

ವಾಷಿಂಗ್ಟನ್,ನ.15-ಅಮೆರಿಕದಲ್ಲಿ ಸುಮಾರು 18 ಶತಕೋಟಿ ಡಾಲರ್‍ಗಳಿಗೂ ಹೆಚ್ಚಿನ ಬಂಡವಾಳ ಹೂಡಿರುವ ಭಾರತೀಯ ಕಂಪನಿಗಳು 1,13,000 ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ದ ವರದಿ ತಿಳಿಸಿದೆ.  ಇಂಡಿಯನ್ ರೂಟ್ಸ್ , ಅಮೆರಿಕನ್ ಸಾಯಿಲ್ ಎಂಬ ಹೆಸರಿನಡಿ ಸಿಐಐ ಮಾಡಿರುವ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಕಂಪನಿಗಳು ಸಾಮಾಜಿಕ ಕಾರ್ಯಕ್ರಮಗಳಿಗೆ 147 ದಶಲಕ್ಷ ಡಾಲರ್‍ಗಳನ್ನು ವಿನಿಯೋಗಿಸುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿವೆ.

ಇಷ್ಟೇ ಅಲ್ಲದೆ ನಾನಾ ಬಗೆಯ ಸಂಶೋಧನೆಗಳ ಅಭಿವೃದ್ಧಿಗಾಗಿ 588 ದಶಲಕ್ಷ ಡಾಲರ್‍ಗಳನ್ನು ವ್ಯಯ ಮಾಡಿವೆ. ಸಿಐಐ ಮಾಡಿರುವ ಈ ವಾರ್ಷಿಕ ವರದಿಯಲ್ಲಿ ಪ್ರಮುಖವಾಗಿ ಈ ಸಾಧನೆ ಮಾಡಿರುವುದು 100ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಎಂದು ಹೇಳಲಾಗಿದೆ.

Facebook Comments

Sri Raghav

Admin