ರಕ್ತರಹಿತ ಕ್ರಾಂತಿ ನಡೆಯಲಿದೆ ಎಂಬುದನ್ನು ತಳ್ಳಿಹಾಕಿದ ಜಿಂಬಾವ್ವೆ ಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

Blood-Less-Correstion--01

ಹರಾರೆ,ನ.15- ಜಿಂಬಾವ್ವೆಯಲ್ಲಿ ಕ್ಷಿಪ್ರ(ರಕ್ತರಹಿತ) ಕ್ರಾಂತಿ ನಡೆಯಲಿದೆ ಎಂಬುದನ್ನು ತಳ್ಳಿ ಹಾಕಿರುವ ದೇಶ ಮಿಲಿಟರಿ ಹಿರಿಯ ಅಧಿಕಾರಿಗಳು, ಯಾವುದೆ ಕಾರಣಕ್ಕು ಅಂತಹ ಗುರಿಯನ್ನು ಭದ್ರತಾ ಪಡೆಗಳು ಹೊಂದಿಲ್ಲ. ಆದರೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ನಿವಾಸದ ಬಳಿ ಜಮಾಯಿಸಬಹುದಾದ ಕ್ರಿಮಿನಲ್‍ಗಳ ಬೇಟೆಗಾಗಿ ರಾಜಭವನದ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.  ಖಂಡಿತಾ ರಾಷ್ಟ್ರದ ಆಡಳಿತಾಧಿಕಾರವನ್ನು ವಶಕ್ಕೆ ಪಡೆಯುವ ಉದ್ದೇಶ ಮಿಲಿಟರಿಗಿಲ್ಲ. ಘನವೆತ್ತ ರಾಷ್ಟ್ರಾಧ್ಯಕ್ಷರಾದ 93ರ ಹರೆಯದ ರಾಬರ್ಟ್ ಮುಗಾಬೆ ಮತ್ತವರ ಕುಟುಂಬದ ಎಲ್ಲಾ ಸದಸ್ಯರು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಇದ್ದಾರೆ. ನಮ್ಮ ಭದ್ರತಾ ಪಡೆಗಳು ಅವರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಸುರಕ್ಷಿಕತೆಯ ಬಗ್ಗೆ ನಾವು ಖಾತ್ರಿಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಾಧ್ಯಕ್ಷರನ್ನು ತಮ್ಮ ಗುರಿಯಾಗಿಸಿಕೊಂಡಿರುವವರನ್ನು ಮಟ್ಟ ಹಾಕುವುದೇ ನಮ್ಮ ಗುರಿ. ಬಂಡುಕೋರರ ಮಟ್ಟ ಹಾಕುವ ನಮ್ಮ ಕಾರ್ಯಾಚರಣೆ ಮುಗಿದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ.  ನಿನ್ನೆಯಿಂದ ಶಸ್ತ್ರಸಜ್ಜಿತ ಸೈನಿಕರು ಮತ್ತು ಸೇನಾ ವಾಹನಗಳು ರಾಜಭವನದ ಸುತ್ತಮುತ್ತ ಠಳಾಯಿಸುತ್ತಿದ್ದುದನ್ನು ಕಂಡ ಜನತೆ ಸೇನೆಯು ಅಧ್ಯಕ್ಷರ ವಿರುದ್ಧ ಕ್ಷಿಪ್ರ ಕ್ರಾಂತಿಗೆ ಸಜ್ಜಾಗಿದ್ದಾರೆ ಎಂದೇ ನಾಗರಿಕರು ಭಾವಿಸಿದ್ದರು. ಏನೇ ಆದರೂ ಮುಗಾಬೆ ವಿರುದ್ದ ಅವರ ವಿರೋಧಿ ಬಣ ಕೆಲವು ಕಾಲಗಳಿಂದಲೂ ಕತ್ತಿ ಮಸೆಯುತ್ತಲೇ ಇದೆ.

1980ರ ಬ್ರಿಟನ್ನಿನ ಆಡಳಿತದಲ್ಲಿ ಸ್ವಾತಂತ್ರ್ಯ ಪಡೆದು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಜಿಂಬಾಬ್ವೆಯ ಅಧ್ಯಕ್ಷರಾಗಿ 93 ವರ್ಷದ ರಾಬರ್ಟ್ ಮುಗಾಬೆ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗಂತೂ ಮುಗಾಬೆ ಮತ್ತು ಮಿಲಟರಿ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ.

Facebook Comments

Sri Raghav

Admin