ವಿಧೇಯಕ ಜನರ ವಿರುದ್ಧವಾಗಿದ್ದರೆ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುತ್ತೇನೆ : ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಳಗಾವಿ, ನ.15- 2017ನೆ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ಸಾರ್ವಜನಿಕರಿಗೆ ವಿರುದ್ಧವಾಗಿದ್ದರೆ ನನ್ನ ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ವಿಧಾನ ಪರಿಷತ್‍ನಲ್ಲಿ ನಿನ್ನೆ ಸವಾಲು ಹಾಕಿದರು. ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ವಿಧೇಯಕ ವಿರೋಧಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದ ಮೂರು ಮಂದಿ ಸಾವನ್ನಪ್ಪಿರುವುದು ನನ್ನ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಕಳೆದ ರಾತ್ರಿಯಿಂದ ನಾನು ನಿದ್ದೆ ಮಾಡಿಲ್ಲ. ನನ್ನಿಂದಾಗಿ ಇಂಥ ಘಟನೆ ನಡೆದಿದೆ ಎಂಬ ಅಪರಾಧಿ ಮನೋಭಾವನೆ ಕಾಡುತ್ತಿದೆ ಎಂದು ಭಾವುಕರಾಗಿ ನುಡಿದರು.

ನನಗೆ ಆರ್‍ಎಸ್‍ಎಸ್ ಸಿದ್ಧಾಂತದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಆದರೆ, ಅವರಲ್ಲಿ ಸಾಕಷ್ಟು ಮಂದಿ ಪ್ರಾಮಾಣಿಕರೂ ಇದ್ದಾರೆ. ಸರ್ಕಾರ ತರಲು ಉದ್ದೇಶಿಸಿರುವ ಈ ವಿಧೇಯಕ ಜನರ ಪರವಾಗಿದೆಯೋ, ಇಲ್ಲವೋ ಎಂಬುದನ್ನು ಆರ್‍ಎಸ್‍ಎಸ್ ಕಾರ್ಯಕರ್ತರೇ ತೀರ್ಮಾನಿಸಲಿ ಎಂದರು.

Facebook Comments

Sri Raghav

Admin