ಸಿಐಡಿ ಎಂದರೆ ‘ಕ್ಲೀನ್‍ಚಿಟ್ ಇನ್ವೆಸ್ಟಿಗೇಷನ್ ಡಿಪಾರ್ಟ್‍ಮೆಂಟ್’

ಈ ಸುದ್ದಿಯನ್ನು ಶೇರ್ ಮಾಡಿ

Suresh-Kumar--01

ಬೆಳಗಾವಿ (ಸುವರ್ಣಸೌಧ), ನ.15- ಸಿಐಡಿ ಕ್ಲೀನ್‍ಚಿಟ್ ಇನ್ವೆಸ್ಟಿಗೇಷನ್ ಡಿಪಾರ್ಟ್‍ಮೆಂಟ್ ಎಂದು ಮಾಜಿ ಸಚಿವ ಸುರೇಶ್‍ಕುಮಾರ್ ಲೇವಡಿ ಮಾಡಿದರು. ಇತ್ತೀಚೆಗೆ ಬಹುತೇಕ ಪ್ರಕರಣಗಳಲ್ಲಿ ಸಿಐಡಿ ಕ್ಲೀನ್‍ಚಿಟ್ ನೀಡಿದೆ. ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಕ್ಲೀನ್‍ಚಿಟ್ ಮಾಡಿ ಅದರ ಕಾರ್ಯಕ್ಷಮತೆ ಏನೆಂಬುದನ್ನು ತೋರಿಸಿದೆ ಎಂದು ಹೇಳಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಸಿಬಿಐ ತನಿಖೆ ಕೈಗೊಂಡಿದ್ದು, ಈಗ ಲಾಡ್ಜ್‍ನಲ್ಲಿ ಸಿಬಿಐನವರಿಗೆ ಬುಲೆಟ್ ಪತ್ತೆಯಾಗಿದೆ. ಅಂದರೆ ಸಿಐಡಿಯವರ ಕಾರ್ಯದಕ್ಷತೆ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಸಿಐಡಿ ಕ್ಲೀನ್‍ಚಿಟ್ ನೀಡುವ ಡಿಪಾರ್ಟ್‍ಮೆಂಟ್ ಆಗಿದೆ ಎಂದು ಹೇಳಿದರು. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

Facebook Comments

Sri Raghav

Admin