ಹಾಪ್‍ಕಾಮ್ಸ್ ಗೆ ಹಣ್ಣು, ತರಕಾರಿ ತಂದ ತಕ್ಷಣವೇ ರೈತರಿಗೆ ಹಣ ಪಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Hopcoms-02

ಬೆಳಗಾವಿ, ನ.15- ಹಾಪ್‍ಕಾಮ್ಸ್ ಸಂಸ್ಥೆಗೆ ತರಕಾರಿ, ಹಣ್ಣು ಸರಬರಾಜು ಮಾಡಿದ ರೈತರಿಗೆ ಅಂದೇ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿಧಾನ ಪರಿಷತ್‍ನಲ್ಲಿ ನಿನ್ನೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ತಾರಾ ಅನುರಾಧಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈವರೆಗೂ ಹಾಪ್‍ಕಾಮ್ಸ್ ಸಂಸ್ಥೆಗೆ ಹಣ್ಣು, ತರಕಾರಿ ಸರಬರಾಜು ಮಾಡಿದ ರೈತರಿಗೆ 3 ರಿಂದ 4 ದಿನಗಳಲ್ಲಿ ಎನ್‍ಇಎಫ್‍ಟಿ ಮೂಲಕ ಅವರ ಖಾತೆಗೆ ಹಣ ವರ್ಗಾಯಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸರಬರಾಜು ಮಾಡಿದ ದಿನವೇ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ರೈತರು ಸರಬರಾಜು ಮಾಡಿದ ಹಣ್ಣು, ತರಕಾರಿಗಳ ಖರೀದಿ ಬಿಲ್‍ಗಳು ರೈತರ ಬ್ಯಾಂಕ್‍ನ ವಿವರಗಳನ್ನು ಪರಿಶೀಲಿಸಿ ಮೇಲಧಿಕಾರಿಗಳ ಅನುಮತಿ ಪಡೆದು ಎನ್‍ಇಎಫ್‍ಟಿ ಮೂಲಕ ಅವರ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದು ಹೇಳಿದರು. ಹಾಪ್‍ಕಾಮ್ಸ್ ಸಂಸ್ಥೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ರೈತರಿಗೆ ಬಾಕಿ ಇರುವ ಗ್ರಾಚುಯಿಟಿ ಹಣವನ್ನು 90 ದಿನಗಳಲ್ಲಿ ಪಾವತಿಸಲಾಗುವುದು. ನಮ್ಮ ಸಂಸ್ಥೆಯಿಂದ ವಿವಿಧ ಸಂಘ-ಸಂಸ್ಥೆಗಳಿಗೆ 2,97,42,436ರೂ. ಬಾಕಿ ಹಣ ನೀಡಬೇಕಾಗಿದೆ. ಹಾಪ್‍ಕಾಮ್ಸ್ ಸಂಸ್ಥೆಯು ಕರ್ನಾಟಕ ಕೈಗಾರಿಕಾ ಸಹಕಾರ ಬ್ಯಾಂಕ್‍ನಲ್ಲಿ ಇಟ್ಟಿದ್ದ 3 ಕೊಟಿ ಎಫ್‍ಡಿ ಹಣ ವನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin