ಹಾರ್ದಿಕ್ ನಲ್ಲಿ ಸರ್ದಾರ್ ಡಿಎನ್‍ಎ : ಪಟೇಲ್ ಮರಿಮೊಮ್ಮಗ ಕಿಡಿ, ಕಾಂಗ್ರೆಸ್ ಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Hardik-Patel--02

ಅಹಮದಾಬಾದ್,ನ.15-ಪಾಟೀದಾರ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸರದಾರ್ ವಲ್ಲಭ ಭಾಯ್ ಪಟೇಲರ ಡಿಎನ್‍ಎ ಹೊಂದಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್ ಅವರ ವಿವಾದಾಸ್ಪದ ಹೇಳಿಕೆ ಮತ್ತು ಸ್ವತಃ ಹಾರ್ದಿಕ್ ಅವರೇ ಪಾಲ್ಗೊಂಡಿದ್ದಾರೆ ಎಂದು ಹೇಳಲಾದ ಲೈಂಗಿಕ ಹಗರಣದ ವಿಡಿಯೋ ಬಹಿರಂಗವಾಗಿರುವುದು ಈಗ ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟು ಮಾಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಹೋರಾಟಕ್ಕೆ ಹಾರ್ದಿಕ್ ಪಟೇಲ್ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಅನೇಕ ತಂತ್ರಗಳನ್ನು ಹೂಡುತ್ತಿದ್ದು , ಈಗ ಆ ತಂತ್ರಗಳೇ ಅವರಿಗೆ ತಿರುಗು ಬಾಣವಾಗಿ ಪರಿಣಮಿಸುತ್ತಿರುವುದರಿಂದ ಕಾಂಗ್ರೆಸ್‍ಗೆ ತೀವ್ರ ಮುಖಭಂಗ ಉಂಟು ಮಾಡಿದೆ.

ಹಾರ್ದಿಕ್ ಪಟೇಲ್ ಅವರು ಈ ದೇಶದ ಉಪಪ್ರಧಾನಿಯಾಗಿದ್ದ ಉಕ್ಕಿನ ಮನುಷ್ಯ ಸರದಾರ್ ಪಟೇಲ್ ಅವರ ಡಿಎನ್‍ಎ ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸರದಾರ್ ಪಟೇಲ್ ಅವರ ಮರಿ ಮೊಮ್ಮಗ ಸಮೀರ್ ಪಟೇಲ್, ಸರದಾರ್ ಪಟೇಲರು ಈ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದವರು ಎಂದು ಹೇಳಿದ್ದಾರೆ.  ಆದರೆ ಹಾರ್ದಿಕ್ ಪಟೇಲ್ ಈ ಸಮಾಜ ಮತ್ತು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ವ್ಯಕ್ತಿಗಳ ಹೋಲಿಕೆಯೇ ಸರಿಯಲ್ಲ. ಸರದಾರ್ ಪಟೇಲ್ ಅವರಿಗೂ ಹಾರ್ದಿಕ್ ಪಟೇಲ್ ಅವರಿಗೂ ಯಾವ ಸಂಬಂಧವೂ ಇಲ್ಲ. ತೀರಾ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಪಟೇಲ್‍ರಂತಹ ಮಹಾನ್ ಪುರುಷರಿಗೆ ಹೋಲಿಕೆ ಮಾಡುವುದು ಕಾಂಗ್ರೆಸ್‍ಗೆ ಶೋಭೆ ತರುವ ವಿಷಯವಲ್ಲ ಎಂದು ಸಮೀರ್ ಪಟೇಲ್ ಹರಿಹಾಯ್ದಿದ್ದಾರೆ.

ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಕಾಂಗ್ರೆಸ್ ನಾಯಕರು ಇಲ್ಲದ ಆಟಗಳನ್ನು ಆಡಲು ಆರಂಭಿಸಿದ್ದಾರೆ. ಹಾರ್ದಿಕ್ ಪಟೇಲ್ ಅವರಿಂದ ಕಾಂಗ್ರೆಸ್‍ಗೆ ಮತ್ತಷ್ಟು ಧಕ್ಕೆಯಾಗುತ್ತದೆಯೇ ಹೊರತು ಲಾಭವಂತೂ ಖಂಡಿತ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.  ಲೈಂಗಿಕ ಹಗರಣ: ಇದೇ ವೇಳೆ ಹಾರ್ದಿಕ್ ಪಟೇಲ್ ಅವರ ಅಕ್ರಮ ಸಂಬಂಧದ್ದು ಎಂದು ಹೇಳಲಾದ ವಿಡಿಯೋವೊಂದು ಬಿಡುಗಡೆಯಾಗಿದ್ದು , ಹಾರ್ದಿಕ್ ಪಟೇಲ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಮತ್ತಿಬ್ಬರು ಪುರುಷರು ಒಬ್ಬ ಮಹಿಳೆಯ ಜೊತೆ ವಿಶ್ರಾಂತಿ ಪಡೆಯುತ್ತಿರುವುದು ಗುಜರಾತ್‍ನಲ್ಲೀಗ ತೀವ್ರ ಸಂಚಲನ ಉಂಟು ಮಾಡಿದೆ.

ಹಾರ್ದಿಕ್ ಪಟೇಲ್ ಹೋಲುವ ವ್ಯಕ್ತಿ ತನ್ನ ತಲೆಯಲ್ಲಿನ ಕೂದಲನ್ನು ತೆಗೆಸಿದ್ದು, ಕಳೆದ ಕೆಲವು ತಿಂಗಳ ಹಿಂದೆ ನಡೆದ ಪ್ರತಿಭಟನೆ ವೇಳೆ ಪಟೇಲ್ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಖಂಡಿಸಿ ತಲೆಯ ಕೂದಲನ್ನು ತೆಗೆಸಿಕೊಂಡಿದ್ದರು.  ಈಗ ಈ ವಿಡಿಯೋ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಹಾರ್ದಿಕ್ ಪಟೇಲ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಭಾರೀ ಹೊಡೆತ ಬೀಳಲಿದೆ.

Facebook Comments

Sri Raghav

Admin