ಅಂಬೇಡ್ಕರದ್ದು ಸುಳ್ಳಿನ ಸಂವಿಧಾನ ಎಂದ ಗೋ ಮಧುಸೂಧನರನ್ನು ಗಡಿಪಾರು ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

hanur
ಹನೂರು,ನ.16- ಡಾ.ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ಸುಳ್ಳಿನ ಸಂವಿಧಾನ ಎಂದು ಹೇಳಿಕೆ ನೀಡಿರುವ ಮೈಸೂರಿನ ಮಾಜಿ ವಿಧಾನ ಪರಿಷತ್ ಸದಸ್ಯ ಗೋ ಮಧುಸೂಧನ್ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹನೂರು ಸಮೀಪ ಕೌದಳ್ಳಿ ಗ್ರಾಮ ಮುಖ್ಯ ರಸ್ತೆಯಲ್ಲಿ ಮೌನ ಪ್ರತಿಭಟನೆ ನಡೆಸಿದ ಡಿಎಸ್‍ಎಸ್ ಕಾರ್ಯಕರ್ತರು ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಗೋ ಮಧುಸೂಧನ್ ಗಡಿಪಾರಿಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ದಲಿತ ಸಂಘ ಸಂಚಾಲಕ ಗೋವಿಂದ ರಾಜು, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಇಡೀ ವಿಶ್ವವೇ ಸ್ವಾಗತಿಸಿದೆ. ಆದರೆ ಗೋ ಮಧುಸೂಧನ್ ಸುಳ್ಳಿನ ಸಂವಿಧಾನ ಎಂದು ಹೇಳಿಕೆ ನೀಡಿರುವುದನ್ನು ಸಮಿತಿ ವಿರೋಧಿಸುತ್ತದೆ ಎಂದರು. ಸಂವಿಧಾನವನ್ನು ವಿರೋಧಿಸುವವರಿಗೆ ಭಾರತ ದೇಶದಲ್ಲಿ ವಾಸಿಸುವ ಹಕ್ಕಿಲ್ಲ. ಅಂತವರನ್ನು ರಕ್ಷಿಸುವ ಸರ್ಕಾರಕ್ಕೆ ಉಳಿಗಾಲ ಇರುವುದಿಲ್ಲ. ಕೂಡಲೇ ಸರ್ಕಾರ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಹನೂರು ತಾಲ್ಲೂಕು ಎಸ್.ಡಿ.ಪಿ.ಐ. ಅಧ್ಯಕ್ಷ ಕೌದಳ್ಳಿ ನೂರುಲ್ಲಾ, ಯುವಜನ ಕಲಾ ಸಂಘದ ಅಧ್ಯಕ್ಷ ರಾಮಾಪುರ ಸುಂದರೇಶ್, ಪಳನಿ ಮೇಡು ದಲಿತ ಸಂಘದ ಅಧ್ಯಕ್ಷ ಯು.ಟಿ. ಕಾರ್ತಿಕ್, ದೊರೆಸ್ವಾಮಿ ಇನ್ನಿತರರು ಹಾಜರಿದ್ದರು.

Facebook Comments