ಕುಂಭ ಮೇಳದ ಮೇಲೆ ಐಎಸ್ಐಎಸ್ ಕಿರಾತಕರ ದಾಳಿ ಆತಂಕ, ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ISIS--02

ತಿರುವನಂತಪುರ/ನವದೆಹಲಿ, ನ.16-ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ವಿವಿಧ ದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾ ಆತಂಕ ಸೃಷ್ಟಿಸಿದ್ದು, ಈಗ ಭಾರತದ ಮೇಲೆ ಕೆಂಗಣ್ಣು ಬೀರಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಹಾ ಕುಂಭ ಮೇಳ, ತ್ರಿಶ್ಯೂರ್ ಪೂರ್ಣಿಮಾ ಮೊದಲಾದ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಪ್ರಸಿದ್ಧ ಉತ್ಸವ ಸಂದರ್ಭಗಳಲ್ಲಿ ಭೀಕರ ದಾಳಿಗಳನ್ನು ನಡೆಸಲು ಸಂಚು ರೂಪಿಸಿರುವ ಸಂಗತಿ ಬಯಲಾಗಿದದಾಳಿ ಕೇರಳದಲ್ಲಿ ಐಎಸ್ ಉಗ್ರರ ಚಟುವಟಿಕೆಗಳು ಚಿಗುರೊಡೆಯುತ್ತಿರುವ ಸಂದರ್ಭದಲ್ಲೇ ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಲಾಸ್ ವೇಗಾಸ್ ಶೈಲಿಯ ದಾಳಿ ನಡೆಸುವುದಾಗಿ ಭಯೋತ್ಪಾದಕರು ಎಚ್ಚರಿಕೆ ನೀಡಿರುವ ಆಡಿಯೋ ಬಿಡುಗಡೆಯಾಗಿದೆ.

10 ನಿಮಿಷಗಳ ಈ ಧ್ವನಿಮುದ್ರಿಕೆ ಮಲೆಯಾಳಂ ಭಾಷೆಯಲ್ಲಿದ್ದು, ಮಹಾ ಕುಂಭ ಮೇಳ, ತ್ರಿಶ್ಶೂರ್ ಪೂರ್ಣಿಮಾ ಉತ್ಸವಗಳ ವೇಳೆ ವಿಧ್ವಂಸಕ ಕೃತ್ಯ ಎಸಗುವುದಾಗಿ ಎಚ್ಚರಿಕೆ ನೀಡಿದೆ. ಭಾರೀ ಸಂಖ್ಯೆಯ ಜನ ಸೇರುವ ಮೇಳಗಳು ಮತ್ತು ಆಚರಣೆಗಳ ಸಂದರ್ಭದಲ್ಲಿ ಏಕೈಕ ಉಗ್ರಗಾಮಿ ಮೂಲಕ ಲೋನ್ ವುಲ್ಫ್ ಆಕ್ರಮಣ (ಕುರಿಗಳ ಮಂದೆ ಮೇಲೆ ಎರಗುವ ಒಂಟಿ ಭಯಾನಕ ತೋಳದ ಮಾದರಿ) ನಡೆಸಬೇಕೆಂದು ಉಗ್ರರು ಮತ್ತು ಅವರ ಬೆಂಬಲಿಗರಿಗೆ ಕರೆ ನೀಡಲಾಗಿದೆ.   ಕೇರಳದ ಪ್ರಾದೇಶಿಕ ಐಎಸ್ ಸಂಘಟನೆಯಾದ ದೌಲತ್-ಉಲ್-ಇಸ್ಲಾಂ ಈ ಧ್ವನಿ ಮುದ್ರಿಕೆ ಬಿಡುಗಡೆ ಮಾಡಿದ್ದು, ಖುರಾನ್‍ನ ಕೆಲವು ಅಂಶಗಳನ್ನು ಉಲ್ಲೇಖಿಸಿ ದಾಳಿ ನಡೆಸುವಂತೆ ಪ್ರಚೋದನೆ ನೀಡಲಾಗಿದೆ.

¾¾ಈ ಭೂಮಿಯಲ್ಲಿ ಹಿಂದು ಮತ್ತು ಕ್ರೈಸ್ತರು ಬದುಕಿರಬಾರದು. ನಿಮ್ಮ ಬುದ್ದಿಶಕ್ತಿಯನ್ನು ಉಪಯೋಗಿಸಿ. ಆಹಾರದಲ್ಲಿ ವಿಷ ಹಾಕಿ ಜನರನ್ನು ಕೊಲ್ಲಿ, ಟ್ರಕ್‍ಗಳನ್ನು ಬಳಸಿ, ತ್ರಿಶ್ಶೂರ್ ಪೂರ್ಣಿಮಾ ಅಥವಾ ಮಹಾ ಕುಂಭ ಮೇಳದಲ್ಲಿ ಜನರತ್ತ ಟ್ರಕ್ ನುಗ್ಗಿಸಿ ಅವರನ್ನು ಮುಗಿಸಿ ಬಿಡಿ. ವಿಶ್ವದ ವಿವಿಧೆಡೆ ಐಎಸ್ ಮುಜಾಹಿದೀನ್‍ಗಳು ಮಾಡುತ್ತಿರುವಂತೆ ನೀವು ಅದನ್ನು ಅನುಸರಿಸಿ. ಲಾಸ್ ವೇಗಾಸ್ ಸಂಗೀತಗೋಷ್ಠಿಯಲ್ಲಿ ನಮ್ಮ ಬೆಂಬಲಿಗನೊಬ್ಬ ಅನೇಕರ ಜನರನ್ನು ಕೊಂದು ಹಾಕಿದ. ಅದೇ ರೀತಿ ನೀವು ಒಂದು ರೈಲಿನ ಹಳಿ ತಪ್ಪಿಸಿ ಅಥವಾ ಚಾಕು ಬಳಸಿ ಎಷ್ಟು ಜನರನ್ನು ಕೊಲ್ಲಲು ಸಾಧ್ಯವೋ ಅಷ್ಟು ಮಂದಿಯನ್ನು ಸಾಯಿಸಿ ಎಂದು ಉಗ್ರಗಾಮಿ ಮುಖಂಡ ರಷೀದ್ ಅಬ್ದುಲ್ಲಾ ಕರೆ ನೀಡಿದ್ದಾನೆ.

ನಿಮ್ಮಿಂದ ಕೊಲ್ಲಲಾಗದಿದ್ದರೆ ಕೊಲ್ಲುವವರಿಗೆ ದನದ ನೆರವನ್ನು ನೀಡಿ ಎಂದು ಉಗ್ರ ರಷೀದ್ ಸಂದೇಶ ನೀಡಿದ್ದಾನೆ. ಆಘ್ಪಾನಿಸ್ತಾನದ ಸ್ಥಳವೊಂದರಿಂದ ಟೆಲಿಗ್ರಾಂ ಮುಲಕ ಬಂದ ಸಂದೇಶವನ್ನು ಆಡಿಯೋ ಕ್ಲಿಪ್ ಮಾಡಿ ಕಳುಹಿಸಲಾಗಿದೆ ಎಂದು ಕೇರಳ ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ದೇಶದ ವಿವಿಧೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಭಾರೀ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin