ಚೀನಾದಲ್ಲಿ ದಟ್ಟ ಮಂಜಿನಿಂದಾಗಿ 30 ವಾಹನಗಳು ಡಿಕ್ಕಿ, 19 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

China--02

ಶಾಂಘೈ, ನ.16-ಚೀನಾದ ಅನ್‍ಹುಯಿ ಪ್ರಾಂತ್ಯದ ಫುಯಂಗ್ ನಗರದಲ್ಲಿ ದಟ್ಟ ಮಂಜಿನಿಂದಾಗಿ 30ಕ್ಕೂ ಹೆಚ್ಚು ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತಗಳಲ್ಲಿ 19 ಮಂದಿ ಮೃತಪಟ್ಟು, ಇತರ 21 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 11 ಪ್ರಯಾಣಿಕರ ಸ್ಥಿತಿ ಶೋಚನೀಯವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆಯಿಂದ ದಟ್ಟ ಮಂಜು ಆವರಿಸಿದ್ದು, ಮುಂದಿನ ರಸ್ತೆ ಕಾಣದೆ ಕಾರುಗಳೂ ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳು ಒಂದಾದ ಮೇಲೆ ಒಂದರಂತೆ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಘಾತದ ತೀವ್ರತೆಯಿಂದಾಗಿ ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಈ ಅಗ್ನಿ ಅವಘಡಗಳಿಂದಲೂ ಕಾರುಗಳು ಸುಟ್ಟು ಭಸ್ಮವಾಗಿವೆ. ಈ ಭೀಕರ ಸರಣಿ ಅಪಘಾತ ಮತ್ತು ಸಾವು-ನೋವಿಗೆ ವಾಯುಮಾಲಿನ್ಯ ಮುಖ್ಯ ಕಾರಣವಾಗಿದೆ. ಈ ಪ್ರದೇಶದಲ್ಲಿ ಭಾರೀ ಮಾಲಿನ್ಯದಿಂದ ಹೊಗೆ ಕವಿದ ದಟ್ಟ ಮಂಜು ಆವರಿಸಲಿದೆ ಎಂದು ಫುಯಂಗ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

Facebook Comments

Sri Raghav

Admin