ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ಏರ್‍ಪೋರ್ಟ್‍ಗೆ ಹಿಂದಿರುಗಿದ ವಿಮಾನ |ಪ್ರಯಾಣಿಕರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

Indigo--011

ಚೆನ್ನೈ, ನ.16-ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ 134 ಪ್ರಯಾಣಿಕರಿದ್ದ ದೋಹಾ ಮಾರ್ಗದ ವಿಮಾನವು ಏರ್‍ಪೋರ್ಟ್‍ಗೆ ಹಿಂದಿರುಗಿದ ಘಟನೆ ಚೆನ್ನೈನಲ್ಲಿ ಇಂದು ಸಂಭವಿಸಿದೆ. ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನವು ಇಂದು ಬೆಳಗ್ಗೆ ಇಲ್ಲಿನ ಅಣ್ಣಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ದೋಹಾಗೆ ತೆರಳಲು ಮೇಲೇರಿದ ನಂತರ ಪಕ್ಷಿಯೊಂದು ವಿಮಾನಕ್ಕೆ ಬಡಿಯಿತು. ಇದರಿಂದ ಎಚ್ಚೆತ್ತ ಪೈಲೆಟ್ ಸಂಭವನೀಯ ಅನಾಹುತ ತಪ್ಪಿಸಲು ತಕ್ಷಣ ವಿಮಾನವನ್ನು ಏರ್‍ಪೋರ್ಟ್‍ನತ್ತ ಹಿಂದಿರುಗುವಂತೆ ಮಾಡಿ ಸುರಕ್ಷಿತ ಭೂಸ್ಪರ್ಶ ಮಾಡಿಸಿದರು.

ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಯಿತು. ಎರಡು ಗಂಟೆಗಳ ತಡವಾಗಿ ಈ ವಿಮಾನ ದೋಹಾದತ್ತ ಪ್ರಯಾಣ ಬೆಳೆಸಿತು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಳೆದ ಭಾನುವಾರ ವಿಮಾನ ಮೇಲೇರುವಾಗ ಕಾಡು ಹಂದಿಯೊಂದು ಅಡ್ಡಬಂದು 160 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

Facebook Comments

Sri Raghav

Admin