ವೈದ್ಯರ ಮುಷ್ಕರಕ್ಕೆ ಸರ್ಕಾರದ ಬೇಜವಾಬ್ದಾರಿಯೆ ಕಾರಣ ; ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಹುಬ್ಬಳ್ಳಿ, ನ.16- ಖಾಸಗಿ ವೈದ್ಯರ ಮುಷ್ಕರದ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಸಮಸ್ಯೆ ಉಲ್ಬಣಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 12ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ರಮೇಶ್‍ಕುಮಾರ್ ಅವರು ಆರೋಗ್ಯ ಮಂತ್ರಿಯಾಗಿ ಜನರ ಆರೋಗ್ಯ ಕಾಪಾಡುತ್ತಿಲ್ಲ ಎಂದು ಆರೋಪಿಸಿದರು.

ಒಬ್ಬ ಮಂತ್ರಿಯ ಪ್ರತಿಷ್ಠೆಯ ಕಾರಣ ವೈದ್ಯರು ಬೀದಿಗಿಳಿದಿದ್ದಾರೆ. ಒಂದು ವಿಧೇಯಕ ಪಾಸ್ ಮಾಡುವುದರಿಂದ ದೊಡ್ಡ ಬದಲಾವಣೆಯಾಗುವುದಿಲ್ಲ. ಇದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದರು. ಸರ್ಕಾರ ಮೊದಲು ತಮ್ಮ ಸ್ವಂತ ವ್ಯವಸ್ಥೆ ಸುಧಾರಿಸಲಿ ಎಂದು ಸಲಹೆ ನೀಡಿದ ಶೆಟ್ಟರ್ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಆಡಳಿತ ಪಕ್ಷದ ಶಾಸಕರು ಕೂಡ ಮಸೂದೆಗೆ ವಿರುದ್ಧವಿದ್ದು, ಒಬ್ಬ ವ್ಯಕ್ತಿಯಿಂದ ಸಮಸ್ಯೆಯಾಗಿದೆ ಎಂದು ನಮ್ಮ ಬಳಿ ಬಂದು ಹೇಳುತ್ತಾರೆ ಎಂದರು. ವಿಧೇಯಕವನ್ನು ಸದ್ಯ ತಡೆಹಿಡಿಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರೆ ವಿವಾದ ಬಗೆಹರಿಯುತ್ತದೆ. ಆದ್ದರಿಂದ ಸರ್ಕಾರ ವೈದ್ಯರ ಜತೆ ಕುಳಿತು ಮಾತುಕತೆ ನಡೆಸಲಿ. ಕೆಲವು ಡಾಕ್ಟರ್ ಮತ್ತು ಕಾಪೋರೇಟ್ ಆಸ್ಪತ್ರೆಗಳು ತಪ್ಪು ಮಾಡುತ್ತವೆ. ಹಾಗಂತ ಎಲ್ಲ ವೈದ್ಯರೂ ತಪ್ಪು ಮಾಡುತ್ತಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದರು.

 

Facebook Comments