ಆಫ್ಘಾನಿಸ್ತಾನದ ಹೊಟೇಲ್‍ನಲ್ಲಿ ಮಾನವಬಾಂಬ್ ಸ್ಫೋಟ : 11 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Afganistan--02

ಕಾಬೂಲ್, ನ.17-ಸಮರ ಸಂತ್ರಸ್ತ ಆಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಂಸಾಕೃತ್ಯಗಳು ಮತ್ತಷ್ಟು ತೀವ್ರಗೊಂಡಿವೆ. ರಾಜಧಾನಿ ಕಾಬೂಲ್‍ನ ಹೊಟೇಲ್ ಒಂದರಲ್ಲಿ ನಡೆಯುತ್ತಿದ್ದ ರಾಜಕೀಯ ಮುಖಂಡರ ಸಭೆಯಲ್ಲಿ ಆತ್ಮಾಹತ್ಯಾ ಬಾಂಬರ್ ನಡೆಸಿದ ಭೀಕರ ದಾಳಿಯಲ್ಲಿ 11 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.  ಮೃತರಲ್ಲಿ ಏಳು ಪೊಲೀಸರು ಮತ್ತು ನಾಲ್ವರು ನಾಗರಿಕರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಭೆ ನಡೆಯುತ್ತಿದ್ದ ಕಾಬೂಲ್‍ನ ಖೈರ್‍ಖಾನಾ ಜಿಲ್ಲೆಯ ಹೊಟೇಲೊಂದಕ್ಕೆ ನುಗ್ಗಿದ ಮಾನವ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡ. ಈ ಆತ್ಮಹತ್ಯಾ ದಾಳಿಯಲ್ಲಿ ಸಾವು-ನೋವು ಸಂಭವಿಸಿತು ಎಂದು ಗೃಹ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದ್ದು, ತನ್ನ ಅಧಿಕೃತ ಸುದ್ಧಿಸಂಸ್ಥೆ ಅಮಕ್ ಮೂಲಕ ಇದನ್ನು ದೃಢಪಡಿಸಿದೆ.

Facebook Comments

Sri Raghav

Admin